BIG NEWS: ಲಸಿಕೆ ಅಭಿಯಾನ ಶುರುವಾಗಿ ಇಂದಿಗೆ ಒಂದು ವರ್ಷ, ಒಟ್ಟು 156 ಕೋಟಿ ಡೋಸ್ ನೀಡಿದ ಭಾರತ 16-01-2022 2:02PM IST / No Comments / Posted In: Corona, Corona Virus News, Latest News, India, Live News ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆಗಳನ್ನ ಬರೆಯುತ್ತಲೆ ಇದೆ. ಕೊರೋನಾ ನಿಯಂತ್ರಿಸಲು ತನ್ನ ದೇಶದಲ್ಲೆ ವ್ಯಾಕ್ಸಿನ್ ಅನ್ನೋ ಪರಿಹಾರ ಕಂಡುಕೊಂಡ ಭಾರತದ ಲಸಿಕಾ ಅಭಿಯಾನ ಶುರುವಾಗಿ ಇಂದಿಗೆ 1 ವರ್ಷವಾಗಿದೆ. ಲಸಿಕೆ ವಿತರಣೆಯಲ್ಲಿ ಹಲವು ಏಳುಬೀಳುಗಳನ್ನ ಕಂಡರೂ, ಒಂದು ವರ್ಷದಲ್ಲಿ 156 ಕೋಟಿ ಡೋಸ್ ವಿತರಿಸೊ ಮೂಲಕ ಸಾರ್ಥಕ ಒಂದು ವರ್ಷದ ಸಂಭ್ರಮದಲ್ಲಿದೆ. ಅಭಿಯಾನ ಸಾಗಿಬಂದ ದಾರಿ 2021ರ ಜನವರಿ 16ರಂದು, ದೇಶದೆಲ್ಲೆಡೆ ಲಸಿಕೆ ಅಭಿಯಾನ ಶುರುವಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನ ಹಂಚಲಾಯಿತು. ಈಗ ಮಕ್ಕಳಿಗು ಲಸಿಕೆಯನ್ನ ನೀಡಲಾಗ್ತಿದ್ದು, ಮುನ್ನೆಚ್ಚರಿಕಾ ಡೋಸ್ ಗಳನ್ನು ನೀಡಲಾಗ್ತಿದೆ. ಒಂದು ವರ್ಷದಲ್ಲಿ, ಒಟ್ಟು 156 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಅದರಲ್ಲಿ, 90.89 ಕೋಟಿ ಜನರಿಗೆ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. 65.44 ಕೋಟಿ ಜನ ಎರಡನೇ ಡೋಸ್ ಪಡೆದಿದ್ದಾರೆ. 3.51 ಕೋಟಿ ಮಕ್ಕಳು ಲಸಿಕೆ ಪಡೆದಿದ್ದಾರೆ. 41.83 ಲಕ್ಷ ಜನ ಮಂಜಾಗ್ರತಾ ಲಸಿಕೆ ಪಡೆದಿದ್ದಾರೆ. 79.75 ಕೋಟಿ ಪುರುಷರು, 76.13 ಕೋಟಿ ಮಹಿಳೆಯರು ಕೊರೋನಾ ಲಸಿಕೆ ಪಡೆದಿದ್ದಾರೆ. ಇಲ್ಲಿಯವರೆಗು 135 ಕೋಟಿ ಕೋವಿಶೀಲ್ಡ್ ಲಸಿಕೆ, 20 ಕೋಟಿ ಕೋವ್ಯಾಕ್ಸಿನ್ ಲಸಿಕೆ ಲಸಿಕೆ ವಿತರಣೆಯಾಗಿದೆ. ಲಸಿಕೆ ಅಭಿಯಾನ ಸಾಗಿ ಬಂದ ದಾರಿಯನ್ನ ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರಮೋದಿ ಅವರು, ವೈರಸ್ ಬಗ್ಗೆ ತಿಳಿದುಕೊಳ್ಳುತ್ತಿರುವಾಗಲೆ ನಮ್ಮ ವಿಜ್ಞಾನಿಗಳು, ಸಂಶೋಧಕರು ದೇಶಿಯವಾಗಿ ಲಸಿಕೆಗಳನ್ನ ಕಂಡು ಹಿಡಿದರು. ವೈರಸ್ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನ್ ಅತಿದೊಡ್ಡ ಪಾತ್ರ ವಹಿಸಿದೆ. ಲಸಿಕೆ ತಯಾರಿಸಿದವರಿಗು, ಲಸಿಕೆ ನೀಡಿದವರಿಗು, ಲಸಿಕೆ ಪಡೆದವರಿಗು ಪ್ರತಿಯೊಬ್ಬರನ್ನು ಪ್ರಧಾನಿ ಅಭಿನಂದಿಸಿದ್ದಾರೆ. Today we mark #1YearOfVaccineDrive. I salute each and every individual who is associated with the vaccination drive. Our vaccination programme has added great strength to the fight against COVID-19. It has led to saving lives and thus protecting livelihoods. https://t.co/7ch0CAarIf — Narendra Modi (@narendramodi) January 16, 2022