alex Certify ಕೋವಿಡ್​ 19 ಗ್ರಾಫ್​ ಕುರಿತಂತೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಕೇಂದ್ರ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 19 ಗ್ರಾಫ್​ ಕುರಿತಂತೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಕೇಂದ್ರ ಸಚಿವಾಲಯ

ದೇಶದಲ್ಲಿ ಕೊರೊನಾ ಪ್ರಕರಣಗಳು ಸಂಪೂರ್ಣವಾಗಿ ಮಾಯವಾಗಿಲ್ಲ. ಪ್ರತಿದಿನ 20 ಸಾವಿರ ಹೊಸ ಕೇಸ್​ಗಳು ವರದಿಯಾಗುತ್ತಿದೆ. ಕೋವಿಡ್​ 19 ಸವಾಲು ಇನ್ನೂ ಮುಗಿದಿಲ್ಲ. ಕೊರೊನಾವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೋವಿಡ್​ 19 ಎರಡನೇ ಅಲೆಯನ್ನು ನಾವಿನ್ನೂ ಸಂಪೂರ್ಣವಾಗಿ ಶಮನ ಮಾಡಿಲ್ಲ. ನಮ್ಮ ನಿರಂತರ ಪ್ರಯತ್ನ ಇನ್ನೂ ಮುಂದುವರಿಯಬೇಕಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ಹೇಳಿದ್ದಾರೆ. ಕೊರೊನಾ ಸಂಬಂಧಿ ಸುದ್ದಿಗೋಷ್ಠಿಯಲ್ಲಿ ಕೇರಳವು ದೇಶದ ಒಟ್ಟು ಪ್ರಕರಣಗಳಲ್ಲಿ 50 ಪ್ರತಿಶತ ಪಾಲನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್​ ಅಗರ್​ವಾಲ್​, ಕೇರಳವನ್ನು ಹೊರತುಪಡಿಸಿ ಇನ್ನೂ ನಾಲ್ಕು ರಾಜ್ಯಗಳು 10 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳನ್ನು ಹೊಂದಿವೆ. ಆ ರಾಜ್ಯಗಳು ಮಹಾರಾಷ್ಟ್ರ, ತಮಿಳುನಾಡು, ಮಿಜೋರಾಂ ಹಾಗೂ ಕರ್ನಾಟಕ ಎಂದು ಹೇಳಿದ್ದಾರೆ.

12 ರಾಜ್ಯಗಳ 28 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಪಾಸಿಟಿವಿಟಿ ದರ 5 ರಿಂದ 10 ಪ್ರತಿಶತವಿದೆ ಎಂದು ಹೇಳಿದ್ದಾರೆ. ಈ 28 ಜಿಲ್ಲೆಗಳಲ್ಲಿ ಅರುಣಾಚಲ ಪ್ರದೇಶ ಹಾಗೂ ಆಸ್ಸಾಂನ ಕೆಲ ಜಿಲ್ಲೆಗಳೂ ಸೇರಿವೆ ಎಂದು ಅಗರವಾಲ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...