alex Certify ಅಪಾಯದಲ್ಲಿವೆ ಭಾರತದ ಮಕ್ಕಳ ಕಣ್ಣುಗಳು…..! ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದಾಗಿ ಕಾಡುತ್ತಿದೆ ಗಂಭೀರ ಸಮಸ್ಯೆ….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯದಲ್ಲಿವೆ ಭಾರತದ ಮಕ್ಕಳ ಕಣ್ಣುಗಳು…..! ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದಾಗಿ ಕಾಡುತ್ತಿದೆ ಗಂಭೀರ ಸಮಸ್ಯೆ….!!

ಸ್ಮಾರ್ಟ್‌ಫೋನ್‌ಗಳಿಂದಾಗಿ ಭಾರತದಲ್ಲಿ ಮಕ್ಕಳು ದೃಷ್ಟಿದೋಷಗಳಿಗೆ ತುತ್ತಾಗುತ್ತಿದ್ದಾರೆ. ಭಾರತದ 13 ಪ್ರತಿಶತದಷ್ಟು ಶಾಲಾ ಮಕ್ಕಳು ಸಮೀಪ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಇತ್ತೀಚಿನ ಅಧ್ಯಯನದಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ ದಶಕದಲ್ಲಿ ಈ ಅಂಕಿ ಅಂಶವು ದ್ವಿಗುಣವಾಗಿದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ.

ಸಮೀಪದೃಷ್ಟಿ ದೋಷವಿದ್ದರೆ ದೂರದ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇದು ಸಾಮಾನ್ಯವಾಗಿ ಬಾಲ್ಯದಲ್ಲಿ ಕಂಡುಬರುತ್ತದೆ, ವಯಸ್ಸು ಹೆಚ್ಚಾದಂತೆ ಸಮಸ್ಯೆ ಕೂಡ ಹೆಚ್ಚಾಗಬಹುದು.. ತೀವ್ರ ಸಮೀಪದೃಷ್ಟಿಯು ರೆಟಿನಾದ ಸಮಸ್ಯೆಗಳನ್ನು ಉಂಟುಮಾಡಬಹುದು.

ಅತಿಯಾದ ಸ್ಕ್ರೀನ್‌ ಟೈಮ್‌ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಹೆಚ್ಚು ಬಳಸುವುದೇ ಸಮೀಪದೃಷ್ಟಿ ದೋಷಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ನಗರ ಪ್ರದೇಶಗಳಲ್ಲಿ ಶೇ. 8.5ರಷ್ಟು ಮಕ್ಕಳಲ್ಲಿ ಈ ಸಮಸ್ಯೆಯಿದೆ. ಗ್ರಾಮೀಣ ಪ್ರದೇಶದ ಶೇ. 6.1ರಷ್ಟು ಮಕ್ಕಳು ಈ ತೊಂದರೆಯಿಂದ ಬಳಲುತ್ತಿದ್ದಾರೆ.

ಸಮೀಪದೃಷ್ಟಿ ದೋಷಕ್ಕೆ ಪರಿಹಾರವೇನು?

ಮಕ್ಕಳ ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಬೇಕು. ಮಕ್ಕಳು ಹೊರಗೆ ಆಟವಾಡಲು ಪ್ರೇರೇಪಿಸಬೇಕು. ಸಮೀಪದೃಷ್ಟಿ ತಡೆಗಟ್ಟುವಲ್ಲಿ ಸೂರ್ಯನ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದು ಕೂಡ ಅವಶ್ಯಕ.

ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಸಮೀಪದೃಷ್ಟಿ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸಮೀಪದೃಷ್ಟಿ ದೋಷದಿಂದ ಬಳಲುತ್ತಾರೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಈ ಸಮಸ್ಯೆ ಆರೋಗ್ಯ ವ್ಯವಸ್ಥೆಯ ಮೇಲೆ ಹೊರೆಯನ್ನು ಹೆಚ್ಚಿಸಬಹುದು. ಆದ್ದರಿಂದ  ಪೋಷಕರು ಮತ್ತು ಶಿಕ್ಷಕರು ಮಕ್ಕಳ ಡಿಜಿಟಲ್ ಸಾಧನಗಳ ಬಳಕೆಯನ್ನು ನಿಯಂತ್ರಿಸಬೇಕು. ಅವರ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...