
ಪೊಲೀಸರ ಕೆಲಸವು ಆಧುನಿಕ ಯುಗದಲ್ಲಿ ತನ್ನದೇ ಆದ ರೀತಿಯಲ್ಲಿ ಸಮಾಜ ಪರಿವರ್ತಿಸಿದಂತೆ ಮಾರ್ಪಾಡು ಆಗುತ್ತಲಿದೆ. ಪೇದೆ, ಇನ್‌ಸ್ಪೆಕ್ಟರ್, ಎಸಿಪಿ, ಡಿಸಿಪಿ ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿ, ಐಜಿ ಮಟ್ಟದ ಅಧಿಕಾರಿಗಳು ಕೂಡ ತಮ್ಮ ಕಾರ್ಯಶೈಲಿಯನ್ನು ಆಧುನಿಕ ಅಗತ್ಯತೆಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ.
ಡಿಜಿಟಲ್ ರೂಪದಲ್ಲಿ ದೂರು ಸ್ವೀಕಾರ, ವಾಟ್ಸ್ಯಾಪ್, ಫೇಸ್‌ಬುಕ್‌ಗಳಲ್ಲಿಅಧಿಕೃತ ಖಾತೆಗಳಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿಯುವುದು, ಜನದಟ್ಟಣೆ ಪ್ರದೇಶಗಳಿಗೆ ಶೀಘ್ರವಾಗಿ ತಲುಪಲು ವೇಗವಾದ ದ್ವಿಚಕ್ರ ಹಾಗೂ ಹೊಸ ಮಾಡೆಲ್ ಕಾರುಗಳ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ ಕೂಡ.
ಆದರೆ, ಸಂಸದೀಯ ಸ್ಥಾಯಿ ಸಮಿತಿಯೊಂದು ಪರಿಶೀಲನೆ ನಡೆಸಿ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಮಂಡಿಸಿರುವ ವರದಿಯಂತೆ ದೇಶಾದ್ಯಂತ ಒಟ್ಟು 16,833 ಪೊಲೀಸ್ ಠಾಣೆಗಳಿವೆ. ಈ ಪೈಕಿ 257 ಠಾಣೆಗಳಲ್ಲಿ ಪೊಲೀಸರಿಗೆ ನಿತ್ಯ ಬಳಕೆಗೆ ಸಂಚಾರಿ ವಾಹನವಿಲ್ಲ. ಜತೆಗೆ 638 ಠಾಣೆಗಳಲ್ಲಿ ಟೆಲಿಫೋನ್ ವ್ಯವಸ್ಥೆ ಇಲ್ಲ. ಬಹುಮುಖ್ಯವಾಗಿ 143 ಠಾಣೆಗಳಲ್ಲಿ ಪೊಲೀಸರಿಗೆ ಶೀಘ್ರ ಸಂವಹನ ಮತ್ತು ನಿಗಾ ಇರಿಸಲು ನೆರವಾಗುವ ’’ವೈರ್‌ಲೆಸ್’’ ಸಾಧನಗಳೇ ಇಲ್ಲ ಎಂದು ವರದಿಯಿಂದ ಬಹಿರಂಗಗೊಂಡಿದೆ.
ಮಹಿಳೆಯರ ಶರ್ಟ್ನಲ್ಲಿ ಗುಂಡಿ ಎಡ ಹಾಗೂ ಪುರುಷರ ಶರ್ಟ್ನಲ್ಲಿ ಬಲಭಾಗದಲ್ಲಿರಲು ಕಾರಣವೇನು ಗೊತ್ತಾ..?
ಇಷ್ಟೊಂದು ಅವ್ಯವಸ್ಥೆಯ ಪೊಲೀಸ್ ಠಾಣೆಗಳು ಹೆಚ್ಚಾಗಿ ಇರುವುದು ಅರುಣಾಚಲ ಪ್ರದೇಶ, ಒಡಿಶಾ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಎಂದಿದೆ ವರದಿ. ಚೀನಾ ಕ್ಯಾತೆ ನಡೆಸುತ್ತಿರುವ ಎಲ್‌ಎಸಿ ಗಡಿ ಹೊಂದಿರುವ ಅರುಣಾಚಲ ಪ್ರದೇಶ ಮತ್ತು ಪಾಕಿಸ್ತಾನವು ಸದಾಕಾಲ ಹೊಂಚುಹಾಕಿ ಕೂತಿರುವ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿನ ಪೊಲೀಸ್ ಠಾಣೆಗಳಲ್ಲಿ ಸಂವಹನ ಸಾಧನಗಳ ಕೊರತೆ ಒಪ್ಪುವಂಥದ್ದಲ್ಲ ಎಂಬ ಅಸಮಾಧಾನವನ್ನು ಅನೇಕ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಹೊರಹಾಕಿದ್ದಾರೆ.
ಸಂವಹನ ಸಾಧನಗಳ ಕೊರತೆಗೆ ಮೂಲ ಕಾರಣ ‘ಮೇಕ್ ಇನ್ ಇಂಡಿಯಾ’ ಎಂಬ ಘೋಷಣೆಯು ಕೇವಲ ಘೋಷಣೆಗೆ ಮಾತ್ರವೇ ಸೀಮಿತವಾಗಿರುವುದು, ನಿಜವಾಗಿ ಆಧುನಿಕ ಉತ್ಪನ್ನಗಳ ತಯಾರಿಕೆ ಭಾರತದಲ್ಲಿ ಆಗುತ್ತಲೇ ಇಲ್ಲ. ಚೀನಾ, ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವುದೇ ಹೆಚ್ಚಾಗಿದೆ. ಈ ಬಗ್ಗೆ ಗೃಹ ಸಚಿವಾಲಯವು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.