ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಹವಾ ಜೋರಾಗಿಯೇ ಕಾಣಿಸುತ್ತಿದೆ. ಇವಿ ದ್ವಿಚಕ್ರ ವಾಹನದ ಬಗ್ಗೆ ಮೂಗು ಮುರಿಯುತ್ತಿದ್ದವರೂ ಈಗ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಆವಿಷ್ಕಾರಗಳು ಕಾಣಿಸುತ್ತಿವೆ.
ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಆಟ್ಯುಮೊಬೈಲ್ ಆಟಂವಡೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ್ದು, ಮೊದಲ 1000 ಬೈಕ್‌ಗಳನ್ನು ಗ್ರಾಹಕರಿಗೆ ರೂ.99,999 ಕ್ಕೆ ನೀಡುತ್ತಿದೆ.
ಇದು ಭಾರತದ ಮೊದಲ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕ್ ಎನಿಸಿದ್ದು, ಹೊಸ ರೇಸರ್ ಮಾದರಿಗೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಅನುಮೋದನೆ ಸಿಕ್ಕಿದೆ. 2.4 ಕಿವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ, ಒಂದೇ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ಮತ್ತು ಗಂಟೆಗೆ 65 ಕಿಮೀ ವೇಗವನ್ನು ನೀಡುತ್ತದೆ.
ನಾವು ಭಾರತೀಯ ರಸ್ತೆ, ಸವಾರರನ್ನು ಗಮನದಲ್ಲಿಟ್ಟುಕೊಂಡು ಈ ಎಲೆಕ್ಟ್ರಿಕ್ ಬೈಕ್ ಅನ್ನು ವಿನ್ಯಾಸಗೊಳಿಸಿದ್ದೇವೆ. ನಮ್ಮ ಆರ್ ಅಂಡ್ ಡಿ ತಜ್ಞರು ಮತ್ತು ಸ್ಥಳೀಯ ಸೌರ ಚಾಲಿತ, ಝೀರೋ ಎಮಿಷನ್ ನಿಂದಾಗಿ ಇದು ನಿಜವಾದ ಗ್ರೀನ್ ಬೈಕ್ ಎಂದು ಆಟ್ಯುಮೊಬೈಲ್ ಸ್ಥಾಪಕ ವಂಶಿ ಜಿ ಕೃಷ್ಣ ಹೇಳಿದ್ದಾರೆ.
ತೆಲಂಗಾಣದಲ್ಲಿರುವ ಕಂಪನಿಯ ಘಟಕದಲ್ಲಿ ಆಟಮ್ ವಾಡರ್ ಅನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ಲಕ್ಷ ಎಲೆಕ್ಟ್ರಿಕ್ ಬೈಕ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.