ಭಾರತದ ವಿಮಾನ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣಗಳ ಮೂಲ ಸೌಕರ್ಯಗಳ ವಿಚಾರದಲ್ಲಿ ಅಜಗಜಾಂತರ ಎನ್ನಬಹುದಾದ ಮಟ್ಟದ ವ್ಯತ್ಯಾಸಗಳಿವೆ. ವಿಮಾನ ನಿಲ್ದಾಣದ ಮಟ್ಟದ ಸೌರ್ಕಯ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಭಾರತೀಯ ರೈಲ್ವೇ ಬೆಂಗಳೂರಿನ ಬೈಯಪ್ಪನಹಳ್ಳಿ ನಿಲ್ದಾಣವನ್ನು ಅಭಿವೃದ್ಧಿಪಡಿಸಿದೆ.
ಕೇಂದ್ರೀಯ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿರುವ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು, 314 ಕೋಟಿ ರೂ.ಗಳ ವೆಚ್ಚದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ರಚಿಸಲಾಗಿದೆ.
ಗಣಿಗಾರಿಕೆ ರಾಯಲ್ಟಿ ವಿಚಾರ: ಸಚಿವರ ಭೇಟಿಯಾದ ನಿಯೋಗದಿಂದ ನಿಯಮ ಸರಳೀಕರಣಕ್ಕೆ ಮನವಿ
ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಫುಡ್ ಕೋರ್ಟ್, ವಿಐಪಿ ಲೌಂಜ್ ಸೇರಿದಂತೆ ವಿಮಾನ ನಿಲ್ದಾಣದ ಸೌಕರ್ಯಗಳನ್ನು ಇಲ್ಲಿ ಕೊಡಮಾಡಲಾಗಿದೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ತಿಳಿಸುತ್ತಿವೆ.
4,200 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ನಿಲ್ದಾಣವು ಪ್ರತಿನಿತ್ಯ 50,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸಲಿದ್ದು, ದಿನವೂ 50 ರೈಲುಗಳನ್ನು ಹ್ಯಾಂಡಲ್ ಮಾಡಬಲ್ಲದಾಗಿದೆ. ನಿಲ್ದಾಣದಲ್ಲಿ ಏಳು ಪ್ಲಾಟ್‌ಫಾರಂಗಳು ಇವೆ.