ಫೋರ್ಬ್ಸ್ ನಿಯತಕಾಲಿಕೆ ಭಾರತದ ನೂರು ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ನ ಗೌತಮ್ ಅದಾನಿ 12 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರ ಪಾಲಾಗಿದ್ದು, ಅವರ ಆಸ್ತಿ ಮೌಲ್ಯ 7 ಲಕ್ಷ ಕೋಟಿ ರೂಪಾಯಿ.
ಇನ್ನು ಮೂರನೇ ಸ್ಥಾನದಲ್ಲಿ 2.2 ಲಕ್ಷ ಕೋಟಿ ರೂಪಾಯಿ ಆಸ್ತಿ ಹೊಂದಿರುವ ರಾಧಾಕೃಷ್ಣ ಧಮಾನಿ ಅವರಿದ್ದು, 1.73 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಸೈರಸ್ ಪೂನಾವಾಲಾ ನಾಲ್ಕನೇ, 1.72 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಶಿವನಾಡರ್ ಐದನೇ, 1.32 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಸಾವಿತ್ರಿ ಜಿಂದಾಲ್ ಆರನೇ, 1.25 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ದಿಲೀಪ್ ಸಾಂಘ್ವಿ 7ನೇ, 1.22 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಹಿಂದುಜಾ ಸಹೋದರರು ಎಂಟನೇ, 1.21 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಕುಮಾರ ಮಂಗಳಂ ಬಿರ್ಲಾ 9ನೇ ಹಾಗೂ 1.17 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಬಜಾಜ್ ಕುಟುಂಬ 10ನೇ ಸ್ಥಾನದಲ್ಲಿದೆ.
ಇನ್ನು ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ 10 ಮಂದಿ ಸ್ಥಾನ ಪಡೆದಿದ್ದು, ಈ ಪೈಕಿ 76,000 ಕೋಟಿ ರೂಪಾಯಿ ಆಸ್ತಿಯೊಂದಿಗೆ ವಿಪ್ರೊ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರಿದ್ದು, ಅವರ ಆಸ್ತಿ ಮೌಲ್ಯ 35,000 ಕೋಟಿ ರೂಪಾಯಿ.
ಮೂರನೇ ಸ್ಥಾನದಲ್ಲಿ ಬೈಜೂಸ್ ಸಂಸ್ಥಾಪಕ ಬೈಜೂ ರಾಘವೇಂದ್ರ ಮತ್ತು ದಿವ್ಯಾ ಗೋಕುಲ್ ನಾಥ್ ಇದ್ದು, ಅವರ ಆಸ್ತಿ ಮೌಲ್ಯ 29 ಸಾವಿರ ಕೋಟಿ ರೂಪಾಯಿ. ನಂತರದ ಸ್ಥಾನಗಳಲ್ಲಿ ಜರೋದ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕುಟುಂಬ 27,000 ಕೋಟಿ ರೂಪಾಯಿ, ಇನ್ಫೋಸಿಸ್ ಗೋಪಾಲಕೃಷ್ಣ 24,000 ಕೋಟಿ ರೂಪಾಯಿ, ಇನ್ಫೋಸಿಸ್ ನಂದನ್ ನಿಲೇಕಣಿ 22,000 ಕೋಟಿ ರೂಪಾಯಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಂದಾರ್ ಶಾ 22,000 ಕೋಟಿ ರೂಪಾಯಿ, ಕಲ್ಯಾಣಿ ಗ್ರೂಪ್ ನ ಬಾಬಾ ಕಲ್ಯಾಣಿ 19000 ಕೋಟಿ ರೂಪಾಯಿ, ಎಂಬಸಿ ಗ್ರೂಪ್ ನ ಜಿತೇಂದ್ರ ವೀರ್ವಾನಿ 15 ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.