ದುನಿಯಾ ಡಿಜಿಟಲ್ ಡೆಸ್ಕ್ : ಭಾರತೀಯರು 2023ರಲ್ಲಿ ಗ್ರಾಹಕ ಸೇವಾ ಸಮಯದ ಕಾಯುವಿಕೆಯಲ್ಲಿ 15 ಶತಕೋಟಿ ಗಂಟೆಗಳನ್ನು ಕಳೆದಿದ್ದಾರೆ, ಅದು $55 ಬಿಲಿಯನ್ ನಷ್ಟು ಆರ್ಥಿಕ ನಷ್ಟಕ್ಕೆ ಸಮನಾಗಿದೆ.
ಸರ್ವೀಸ್ನೌ ಸಂಸ್ಥೆಯ ಹೊಸ ಸಂಶೋಧನೆ ಪ್ರಕಾರ, ಭಾರತದ ಪ್ರತೀ ನಾಗರಿಕರು ನಿಧಾನಗತಿಯ ಸೇವೆಯ ಕಾರಣಕ್ಕೆ ಕಾಯುವಿಕೆಯಲ್ಲಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ದಿನಗಳನ್ನು ಕಳೆಯುತ್ತಾರೆ ಮತ್ತು ಮೂರನೇ ಎರಡರಷ್ಟು ಮಂದಿ ಕಂಪನಿ ಅಥವಾ ಬ್ರ್ಯಾಂಡ್ ಅನ್ನು ಬದಲಿಸುವ ಆಲೋಚನೆ ಮಾಡುತ್ತಾರೆ.
ಭಾರತ, ಜುಲೈ 31, 2024: ಬಿಸಿನೆಸ್ ಟ್ರಾನ್ಸ್ ಫಾರ್ಮೇಷನ್ ಗೆ ಇರುವ ಎಐ ಪ್ಲಾಟ್ ಫಾರ್ಮ್ ಆಗಿರುವ ಸರ್ವೀಸ್ನೌ ಮಾಡಿರುವ ಹೊಸ ಸಂಶೋಧನೆಯ ಪ್ರಕಾರ, ಭಾರತೀಯರು ಹೋಲ್ಡ್ ಟು ಕಸ್ಟಮರ್ ಸರ್ವೀಸ್ (ಗ್ರಾಹಕರಿಗೆ ಕಾಯಿಸುವುದು) ಕಾರಣದಿಂದ 15 ಶತಕೋಟಿ ಗಂಟೆಗಳಿಗೂ ಹೆಚ್ಚು ಸಮಯವನ್ನು ಕಳೆದಿದ್ದಾರೆ. ‘ಕಸ್ಟಮರ್ ಎಕ್ಸ್ ಪೀರಿಯನ್ಸ್ ಇಂಟೆಲಿಜೆನ್ಸ್ ರಿಪೋರ್ಟ್ 2024’ ವರದಿಯು ಒಬ್ಬ ಗ್ರಾಹಕ ಯಾವುದೇ ದೂರು ಅಥವಾ ಸಮಸ್ಯೆಯ ಪರಿಹಾರ ಕಾರಣಕ್ಕೆ ಕಾಯುವಿಕೆಯಲ್ಲಿ ಸರಾಸರಿ ಒಂದಕ್ಕಿಂತ ಹೆಚ್ಚು ದಿನವನ್ನು (30.7 ಗಂಟೆಗಳು) ಕಳೆದಿದ್ದಾರೆ ಎಂದು ತಿಳಿಸಿದೆ. ಇದು ವಾರ್ಷಿಕವಾಗಿ $55 ಬಿಲಿಯನ್* (ಯುಎಸ್ಡಿ)ಯಷ್ಟು ಆರ್ಥಿಕ ನಷ್ಟಕ್ಕೆ ಸಮಾನಾಗಿದೆ ಎಂದೂ ತಿಳಿಸಲಾಗಿದೆ. (ಈ ಬರಹದ ಕೊನೆಯಲ್ಲಿ ಲೆಕ್ಕಾಚಾರ ಟಿಪ್ಪಣಿಗಳನ್ನು ನೋಡಬಹುದು)
18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ 4500ಕ್ಕೂ ಹೆಚ್ಚು ಭಾರತೀಯರು ಲೋನರ್ಗನ್ ಸಹಯೋಗದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದು, ಕಳೆದ ವರ್ಷದಲ್ಲಿ ಗ್ರಾಹಕ ಸೇವಾ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಲು ನೆರವಾಗಿದ್ದಾರೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಂದಿ ತಮ್ಮ ಕಾಯುವಿಕೆ ಸಮಯವು ಹಿಂದಿನ ವರ್ಷಗಳಿಗಿಂತ ಈಗ ಇನ್ನೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ನಿಧಾನ ಗತಿಯ ಸೇವೆ ಎಂದರೆ ಪ್ರತೀ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ಉದ್ಯೋಗಿಯೊಬ್ಬ ಸರಾಸರಿ 3.9 ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರ್ಥ. ವಿಶೇಷ ಎಂದರೆ ಪ್ರತಿಕ್ರಿಯಿಸಿದವರಲ್ಲಿ 66 ಪ್ರತಿಶತ ಮಂದಿ ತಮ್ಮ ಸಮಸ್ಯೆಯನ್ನು ಮೂರು ಕೆಲಸದ ದಿನಗಳಲ್ಲಿ ಪರಿಹರಿಸದಿದ್ದರೆ ಮತ್ತೊಂದು ಕಂಪನಿಗೆ ಹೋಗುವ ಮನಸ್ಸು ಮಾಡುವುದಾಗಿ ತಿಳಿಸಿದ್ದಾರೆ.