ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ 7 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಚಿಕನ್ ಬಿರಿಯಾನಿ ಮತ್ತೊಮ್ಮೆ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿ ಹೊರಹೊಮ್ಮಿದೆ.
ವರದಿಯ ಪ್ರಕಾರ, ಚಿಕನ್ ಬಿರಿಯಾನಿ ಸತತ ಏಳನೇ ವರ್ಷಕ್ಕೆ ಅಪ್ಲಿಕೇಶನ್‌ನಲ್ಲಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿ ಅಗ್ರಸ್ಥಾನದಲ್ಲಿದೆ.
ಒಂದು ನಿಮಿಷಕ್ಕೆ 137 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ! ಅಂದರೆ ಸೆಕೆಂಡಿಗೆ 2.28 ಬಿರಿಯಾನಿಗಳ ಆರ್ಡರ್ ಆಗಿದೆ ಎಂದು ಸ್ವಿಗ್ಗಿ ಹೇಳಿದೆ.
ಚಿಕನ್ ಬಿರಿಯಾನಿ ನಂತರ ಮಸಾಲಾ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ ಮತ್ತು ಬಟರ್ ನಾನ್ ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರಗಳಾಗಿವೆ.
ಇವುಗಳನ್ನು ಹೊರತುಪಡಿಸಿದರೆ ಭಾರತೀಯರು ಇಟಾಲಿಯನ್ ಪಾಸ್ತಾ, ಪಿಜ್ಜಾ, ಮೆಕ್ಸಿಕನ್ ಬೌಲ್, ಸ್ಪೈಸಿ ರಾಮೆನ್ ಮತ್ತು ಸುಶಿಯಂತಹ ಅಂತರಾಷ್ಟ್ರೀಯ ಖಾದ್ಯಗಳನ್ನು ತಿನ್ನುವ ಉತ್ಸಾಹದಲ್ಲಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ರವಿಯೊಲಿ (ಇಟಾಲಿಯನ್) ಮತ್ತು ಬಿಬಿಂಬಾಪ್ (ಕೊರಿಯನ್) ನಂತಹ ವಿದೇಶಿ ಆಹಾರ 2022 ರಲ್ಲಿ ಜನಪ್ರಿಯ ಆಯ್ಕೆಗಳಾಗಿ ಹೊರಹೊಮ್ಮಿದವು.
ರಾತ್ರಿ 10 ರ ನಂತರ 22 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮಾಡುವುದರೊಂದಿಗೆ ಪಾಪ್‌ಕಾರ್ನ್ ಪಟ್ಟಿಯನ್ನು ಆಳಿದೆ. 2022 ರಲ್ಲಿ 27 ಲಕ್ಷ ಬಾರಿ ಆರ್ಡರ್ ಮಾಡಲಾದ ಎಟರ್ನಲ್ ಗುಲಾಬ್ ಜಾಮೂನ್ ನೆಚ್ಚಿನ ಸಿಹಿತಿಂಡಿಯಾಗಿ ಹೊರಹೊಮ್ಮಿದೆ.