alex Certify ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳತ್ತ ವಾಲುತ್ತಿರುವ ಭಾರತೀಯರು: ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳತ್ತ ವಾಲುತ್ತಿರುವ ಭಾರತೀಯರು: ಅಧ್ಯಯನದಲ್ಲಿ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯತ್ತ ಭಾರತೀಯರು ಹೆಚ್ಚು ಆಕರ್ಷಿತರಾಗುತ್ತಿದ್ದು, ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ವಾಹನಗಳತ್ತ ಒಲವು ಬೆಳೆಸಿಕೊಂಡಿದ್ದಾರೆ ಎಂದು ಡೆಲಾಯ್ಟ್‌ ಗ್ಲೋಬಲ್ ಆಟೋಮೋಟಿವ್‌ ಗ್ರಾಹಕ ಅಧ್ಯಯನ 2022ರ ವರದಿ ತಿಳಿಸುತ್ತಿದೆ.

ದೇಶದ ಗ್ರಾಹಕರ ಪೈಕಿ ಮೂರರಲ್ಲಿ ಒಬ್ಬರು ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ವಾಹನಗಳ ಮೇಲೆ ಒಲವು ತೋರಿದ್ದಾರೆ. ಪರಿಸರ-ಸ್ನೇಹಿಯಾಗಿ ಸ್ವಾವಲಂಬನೆಯಿಂದ ಸುದೀರ್ಘಾವಧಿ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಿಸುವತ್ತ ಭಾರತ ಗಮನ ಹರಿಸುತ್ತಿರುವ ನಡುವೆ ಈ ಬೆಳವಣಿಗೆ ಮೇಲೆ ಅಧ್ಯಯನ ಬೆಳಕು ಚೆಲ್ಲಿದೆ.

ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್‌ ಖರೀದಿಸಲು ಮುಂದಾಗಿದ್ದೀರಾ…? ಹಾಗಾದ್ರೆ ಈ ಮಾಡೆಲ್‌ ಗಳನ್ನೊಮ್ಮೆ ನೋಡಿ

ಅಧ್ಯಯನದ ಪ್ರಕಾರ 59%ನಷ್ಟು ಭಾರತೀಯರು ಹವಾಮಾನ ಬದಲಾವಣೆ, ಮಾಲಿನ್ಯ ಮಟ್ಟಗಳು, ಗ್ಯಾಸೋಲಿನ್/ಡೀಸೆಲ್ ವಾಹನಗಳಿಂದ ಆಗುವ ಮಾಲಿನ್ಯದ ಕುರಿತು ಕಾಳಜಿ ಹೊಂದಿದ್ದಾರೆ. ಕಡಿಮೆ ಇಂಧನ ಬೆಲೆಗಳು, ಪರಿಸರ ಕಾಳಜಿ ಹಾಗೂ ಸುಧಾರಿತ ಚಾಲನಾ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ ಎಂದು ಇದರಿಂದ ತಿಳಿದುಬಂದಿದೆ.

ಬ್ಯಾಟರಿ ಸ್ವಾಪಿಂಗ್ ಮತ್ತು ಚಾರ್ಜಿಂಗ್ ಮೂಲ ಸೌಕರ್ಯ ನೀಡುವತ್ತ ಮುಂದಿನ ವಿತ್ತೀಯ ವರ್ಷದ ಬಜೆಟ್‌ನಲ್ಲಿ ಗಮನ ಹರಿಸಿರುವ ಕೇಂದ್ರ ಸರ್ಕಾರವು ಹಸಿರು ಮೊಬಿಲಿಟಿಯತ್ತ ಎಷ್ಟರ ಮಟ್ಟಿಗೆ ಆದ್ಯತೆ ನೀಡುತ್ತಿದೆ ಎಂದು ಸಾರಿ ಹೇಳಿದೆ.

2021ರ ಸೆಪ್ಟೆಂಬರ್‌-ಅಕ್ಟೋಬರ್ ಅವಧಿಯಲ್ಲಿ, ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿ ಸೇರಿದಂತೆ ಆಟೋಮೋಟಿವ್ ಕ್ಷೇತ್ರದ ಮೇಲೆ ಪರಿಣಾಮ ಬೀರುವ ವಿವಿಧ ನಿರ್ಣಾಯಕ ಸಮಸ್ಯೆಗಳ ಸಂಬಂಧ ಅಭಿಪ್ರಾಯಗಳನ್ನು ಅನ್ವೇಷಿಸಲು ಮುಂದಾದ ಡೆಲಾಯ್ಟ್, 25 ದೇಶಗಳಲ್ಲಿ 26,000 ಕ್ಕೂ ಹೆಚ್ಚು ಗ್ರಾಹಕರನ್ನು ಸಮೀಕ್ಷೆಗೆ ಒಳಪಡಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...