ಅಮೆರಿಕಾದ ಇಂಡಿಯಾನಾದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. 48 ವರ್ಷದ ಜೆನ್ನಿಫರ್ ಲೀ ವಿಲ್ಸನ್ ಅನ್ನೋ ಹೆಂಗಸು ತನ್ನ 10 ವರ್ಷದ ಮಗ ಡಕೋಟಾ ಲೆವಿ ಸ್ಟೀವನ್ಸ್‌ನನ್ನು ಕೊಲೆ ಮಾಡಿದ್ದಾಳೆ.
ಏನಾಯ್ತು ಅಂದ್ರೆ, ಆ ಮಗು ಮನೆ ಬಿಟ್ಟು ಓಡಿ ಹೋಗಿತ್ತು. ಆ ಹೆಂಗಸು ಅವನನ್ನ ನೆರೆಮನೆಯಲ್ಲಿ ಹಿಡಿದು ಮನೆಗೆ ಕರ್ಕೊಂಡು ಬಂದಿದ್ದಾಳೆ. ಆದ್ರೆ, ಮಗು ಮತ್ತೆ ರಂಪಾಟ ಮಾಡ್ತಿದ್ದ. ಅದಕ್ಕೆ ಆಕೆ ಅವನನ್ನ ಹೋಗದಂತೆ ತಡೆಯೋಕೆ ಪ್ರಯತ್ನಿಸಿದ್ದಾಳೆ. ಆದ್ರೆ, ಅವರಿಬ್ಬರೂ ನೆಲಕ್ಕೆ ಬಿದ್ದಿದ್ದಾರೆ.
ಆ ಮಹಿಳೆ 340 ಪೌಂಡ್ ತೂಕ ಇದ್ದು, ತನ್ನ ಮಗನ ಹೊಟ್ಟೆ ಮೇಲೆ ಐದು ನಿಮಿಷ ಕೂತಿದ್ದಾಳೆ. ಮಗು ಚಲಿಸುವುದನ್ನು ನಿಲ್ಲಿಸಿದ್ರೂ, ಆ ಹೆಂಗಸು ಅವನು ನಾಟಕ ಮಾಡ್ತಿದ್ದಾನೆ ಅಂದುಕೊಂಡಿದ್ದಾಳೆ. ಕೊನೆಗೆ ಸಿಪಿಆರ್ ಮಾಡಿ 911 ಗೆ ಕಾಲ್ ಮಾಡಿದ್ದಾಳೆ. ಆದ್ರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಸತ್ತು ಹೋಗಿತ್ತು.
ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ, ಮಗು ಉಸಿರುಗಟ್ಟಿ ಸತ್ತಿದ್ದಾನೆ. ಇದು ಕೊಲೆ ಅಂತಾ ರಿಪೋರ್ಟ್ ಬಂದಿದೆ. ಕೋರ್ಟ್ ಆ ಹೆಂಗಸಿಗೆ 6 ವರ್ಷ ಜೈಲು ಶಿಕ್ಷೆ ಕೊಟ್ಟಿದೆ.
ಈ ಘಟನೆ ಕೇಳಿದ್ರೆ, ಎಂಥವರಿಗಾದ್ರೂ ಬೇಜಾರಾಗುತ್ತೆ. ಮಕ್ಕಳು ತಪ್ಪು ಮಾಡಿದ್ರೆ ಬುದ್ಧಿ ಹೇಳಬೇಕು, ಹೊಡೆಯಬಾರದು. ಈ ಹೆಂಗಸು ಮಾಡಿದ ತಪ್ಪು ಕ್ಷಮಿಸಲಾಗದ್ದು.