ಟೋಕಿಯೊ ಒಲಂಪಿಕ್ಸ್ ನಲ್ಲಿಂದು ಭಾರತ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ಅಧ್ಬುತ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 4-3 ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಭಾರತ ಮಹಿಳಾ ಹಾಕಿ ತಂಡದ ಕ್ವಾರ್ಟರ್ ಫೈನಲ್ ದಾರಿ ತೆರೆದಿದೆ. ಹಾಕಿಯಲ್ಲಿ ಭಾರತ ತಂಡಕ್ಕೆ ಒಂದು ಪದಕ ಸಿಗುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ನಾಲ್ಕನೇ ನಿಮಿಷದಲ್ಲಿಯೇ ಭಾರತ ಮೊದಲ ಗೋಲು ಗಳಿಸಿತು. ಭಾರತದ ಪರವಾಗಿ ವಂದನಾ ಕಟಾರಿಯಾ ಅತ್ಯಧಿಕ ಮೂರು ಗೋಲುಗಳನ್ನು ಗಳಿಸಿ ತಂಡಕ್ಕೆ ಜಯ ತಂದಿದ್ದಾರೆ.
ಐದು ಪಂದ್ಯಗಳಿಂದ ಎರಡು ಗೆಲುವಿನೊಂದಿಗೆ ಭಾರತ ತಂಡ ಪೂಲ್ ಎ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಐರ್ಲೆಂಡ್ ಸೋಲುಂಡಲ್ಲಿ, ಭಾರತ ಕ್ವಾರ್ಟರ್ ಫೈನಲ್ಗೆ ಹೋಗಲಿದೆ. ಐರ್ಲೆಂಡ್ ನಾಲ್ಕು ಪಂದ್ಯಗಳಿಂದ ಮೂರು ಅಂಕಗಳನ್ನು ಹೊಂದಿದೆ.
ದಕ್ಷಿಣ ಆಫ್ರಿಕಾ ತನ್ನ ಎಲ್ಲಾ ಐದು ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಕ್ವಾರ್ಟರ್ ಫೈನಲ್ ರೇಸ್ ನಿಂದ ಹೊರಬಿದ್ದಿದೆ.