ಭಾರತದಲ್ಲಿ ಸಾಂಪ್ರದಾಯಿಕ ಮದುವೆಗಳು ಭಾರೀ ಸದ್ದಿನಿಂದಲೇ ನಡೆಯುತ್ತವೆ. ವರ – ವಧುವಿನ ಮೆರವಣಿಗೆ ವೇಳೆ ಅದ್ಧೂರಿ ಆಚರಣೆ, ಜೋರು ಧ್ವನಿಯಲ್ಲಿ ಹಾಡು ಹಾಕಿ ನೃತ್ಯ ಮಾಡುವುದು ಸೇರಿದಂತೆ ಸದ್ದು ಗದ್ದಲದಲ್ಲೇ ಮದುವೆ ಸಂಭ್ರಮಗಳು ಜರುಗುತ್ತವೆ. ಆದರೆ ಕಾಲ ಬದಲಾದಂತೆ ಮದುವೆ ಆಚರಣೆಯಲ್ಲೂ ಬದಲಾವಣೆಗಳಾಗ್ತಿವೆ.
ಅದೇನೆಂದರೆ ಆ ಮದುವೆ ಮೆರವಣಿಗೆಯಲ್ಲಿ ಹಾಡು, ನೃತ್ಯ, ಸಂಭ್ರಮ ಎಲ್ಲವೂ ಇತ್ತು, ಆದರೆ ಸದ್ದು ಮಾತ್ರ ಇರಲಿಲ್ಲ. ಅರೆ ! ಇದು ಹೇಗೆ ಸಾಧ್ಯ ಎಂದು ಯೋಚಿಸಿದರೆ, ಅದನ್ನು ಸಾಧ್ಯವಾಗಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಇದರಲ್ಲಿ ಮದುವೆ ಸಂಭ್ರಮದಲ್ಲಿ ವರನ ಮೆರವಣಿಗೆ ನಡೆಯುತ್ತಿರುತ್ತದೆ.
ಈ ವೇಳೆ ಹಾಡಿಗೆ ಮೆರವಣಿಗೆಯಲ್ಲಿದ್ದವರು ನೃತ್ಯ ಮಾಡುತ್ತಿರುತ್ತಾರೆ. ಆದರೆ ಅವರೆಲ್ಲ ಹಾಡು ಕೇಳಲು ಹೆಡ್‌ಫೋನ್‌ಗಳನ್ನು ಬಳಸಿದ್ದು ಯಾವುದೇ ಶಬ್ದವಿಲ್ಲದೆ ನೃತ್ಯ ಮಾಡಿದ್ದಾರೆ. ಈ ಹೊಸ ಮತ್ತು ವಿಭಿನ್ನ ಪ್ರಯತ್ನದ ವಿಡಿಯೋ “ಹೊಸ ಯುಗದ ಮೌನ ಮೆರವಣಿಗೆ” ಎಂದು ಗಮನ ಸೆಳೆದಿದ್ದು ವೈರಲ್ ಆಗ್ತಿದೆ.
ಇದುವರೆಗೆ ಈ ವಿಡಿಯೋ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವರು ವಿನೂತನ ಪ್ರಯತ್ನವನ್ನು ಹುರಿದುಂಬಿಸಿದರೆ, ಇತರರು ಅಂತಹ ಮೆರವಣಿಗೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ. “ಡ್ಯೂಡ್….. ಇದು ಒಳ್ಳೆಯ ಐಡಿಯಾ….. ಬೇರೆಯವರಿಗೆ ಇದು ಡಿಸ್ಟರ್ಬ್ ಮಾಡುವುದಿಲ್ಲ” ಎಂದು ಪ್ರಶಂಸಿಸಿದ್ದಾರೆ.