ಇ-ಕಾಮರ್ಸ್ ಶಾಪಿಂಗ್ ನಲ್ಲಿ ಘಟಿಸುವ ಡೆಲಿವರಿ ಎಡವಟ್ಟುಗಳ ಸಾಲಿಗೆ ಸೇರುವ ಮತ್ತೊಂದು ನಿದರ್ಶನದಲ್ಲಿ ಕಿರುತೆರೆ ನಟ ಪರಸ್ ಕಳ್ನಾವತ್ ಇಯರ್ ಫೋನ್ ಆರ್ಡರ್ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಖಾಲಿ ಡಬ್ಬವೊಂದನ್ನು ಡೆಲಿವರಿ ಪಡೆದಿದ್ದಾರೆ.
ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಜೊತೆ ನಥಿಂಗ್ 1 ಇಯರ್‌ಫೋನ್ ಆರ್ಡರ್ ಮಾಡಿದ ’ಅನುಪಮಾ’ ಖ್ಯಾತಿಯ ಪರಸ್ ಖಳ್ನಾವತ್ ತಮಗೆ ಖಾಲಿ ಡಬ್ಬವನ್ನು ಡೆಲಿವರಿಯಾಗಿ ಸಿಕ್ಕ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ರಾಶಿಯವರಿಗಿದೆ ಇಂದು ವಾಣಿಜ್ಯ ವ್ಯವಹಾರದಲ್ಲಿ ಲಾಭ
ಫ್ಲಿಪ್‌ಕಾರ್ಟ್‌ನಿಂದ ತಮಗೆ ಸಿಕ್ಕ ಖಾಲಿ ಡಬ್ಬದ ಚಿತ್ರವನ್ನು ಶೇರ್ ಮಾಡಿಕೊಂಡ ಪರಸ್, ಈ ರೀತಿ ಎಡವಟ್ಟಿನ ಸೇವೆ ಮೂಲಕ ಇ-ಕಾಮರ್ಸ್ ದಿಗ್ಗಜ ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಕಳೆದುಕೊಳ್ಳಲಿದೆ ಎಂದಿದ್ದಾರೆ.
“@Flipkartನಿಂದ ಬಂದ @nothing ಡಬ್ಬದಲ್ಲಿ ನಾನು ಏನನ್ನೂ ರಿಸೀವ್ ಮಾಡಿಲ್ಲ ನೋಡಿ. ಕಾಲ ಕಳೆದಂತೆ ಫ್ಲಿಪ್‌ಕಾರ್ಟ್ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದು, ಶೀಘ್ರವೇ ಫ್ಲಿಪ್‌ಕಾರ್ಟ್‌ನಿಂದ ಜನರು ವಸ್ತುಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಲಿದ್ದಾರೆ,” ಎಂದಿದ್ದಾರೆ.
ತಿನ್ನಲು ಕಹಿ….. ಆರೋಗ್ಯಕ್ಕೆ ಸಿಹಿ….. ಹಾಗಲಕಾಯಿ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಫ್ಲಿಪ್‌ಕಾರ್ಟ್, “ದಯವಿಟ್ಟು ಕ್ಷಮಿಸಿ. ಆರ್ಡರ್ ಬಗ್ಗೆ ನಿಮ್ಮ ಕಳಕಳಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ನಾವು ನಿಮಗೆ ಸಹಾಯ ಮಾಡಲಿದ್ದೇವೆ. ದಯವಿಟ್ಟು ಆರ್ಡರ್ ಐಡಿಯನ್ನು ನಮ್ಮೊಂದಿಗೆ ಶೇರ್ ಮಾಡಿ, ಇದರಿಂದ ಘಟನೆ ಬಗ್ಗೆ ಇನ್ನಷ್ಟು ತಿಳಿದುಕೊಂಡು ನಿಮಗೆ ನೆರವಾಗಲು ನಮಗೆ ಅನುವಾಗುತ್ತದೆ. ನಿಮ್ಮ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ,” ಎಂದು ಪ್ರತಿಕ್ರಿಯೆ ನೀಡಿದೆ.
ಈ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟ ಕೆಲ ನೆಟ್ಟಿಗರು ತಮಗೂ ಸಹ ಇಂಥದ್ದೇ ಅನುಭವಗಳಾಗಿರುವುದನ್ನು ಹಂಚಿಕೊಂಡಿದ್ದಾರೆ.
https://twitter.com/paras_kalnawat/status/1448163886398590977?ref_src=twsrc%5Etfw%7Ctwcamp%5Etweetembed%7Ctwterm%5E1448163886398590977%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Findian-tv-actor-orders-nothing-earphones-from-flipkart-gets-nothing-in-box-4326716.html