ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ಶನಿವಾರ ಭಾರಿ ಹಿಮಪಾತದ ನಡುವೆ ಗರ್ಭಿಣಿ ಮಹಿಳೆಯ ಜೀವವನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ಮತ್ತೊಮ್ಮೆ ಹೀರೋಗಳಾಗಿದ್ದಾರೆ.
ವಿಲ್ಗಮ್ ಸೇನಾ ಶಿಬಿರದ ಸೈನಿಕರಿಗೆ ರಾತ್ರಿ 10:40 ಕ್ಕೆ ಕರೆ ಬಂದಿದ್ದು, ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯನ್ನು ತುರ್ತು ರಕ್ಷಣೆ ಮತ್ತು ವೈದ್ಯಕೀಯ ಸ್ಥಳಾಂತರಿಸುವಂತೆ ಕೋರಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸೈನಿಕರು ಸ್ಥಳಕ್ಕೆ ತಲುಪಿದ್ದಾರೆ.
ಕಳೆದ ಎರಡು ದಿನಗಳಿಂದ ತೀವ್ರ ಹಿಮಪಾತದಿಂದಾಗಿ ಖಾನ್ಬಾಲ್ನಿಂದ ಪಿಎಚ್ಸಿ ವಿಲ್ಗಾಮ್ಗೆ ಹೋಗುವ ರಸ್ತೆ ಹಿಮದಿಂದ ಆವೃತವಾಗಿತ್ತು. ಆರ್ಮಿ ಕ್ಯಾಂಪ್ ಕಕ್ರೋಸಾದ ರಕ್ಷಣಾ ತಂಡವು ಸಂಕಷ್ಟದ ಕರೆಗೆ ತಕ್ಷಣ ಸ್ಪಂದಿಸಿ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದೆ. ಭಾರತೀಯ ಸೇನಾ ಜವಾನರ ಈ ವೀರೋಚಿತ ಪ್ರಯತ್ನವು ಅವರ ಬದ್ಧತೆ ಮತ್ತು ಶೌರ್ಯವನ್ನು ತೋರಿಸುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.