ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡು ದಿನಗಳ ಹಿಂದೆ ಎರಡನೇ ಮದುವೆಯಾದರು. ಹೆಚ್ಚು ಅಬ್ಬರವಿಲ್ಲದೇ ಆತ್ಮೀಯರು, ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.
ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿಯ ಉನ್ನತ ನಾಯಕರು ಈ ಮದುವೆಗೆ ಸಾಕ್ಷಿಯಾದರು. ಭಾರತೀಯ ವಿವಾಹಗಳಲ್ಲಿ ಊಟಕ್ಕೆ ಪ್ರಾಧಾನ್ಯತೆ ಇದ್ದೇ ಇರುತ್ತದೆ. ಭಗವಂತ್ ಮಾನ್ ಮದುವೆಯಲ್ಲಿ ಕೂಡ ಹೀಗೇ ಆಗಿತ್ತು.
ಅವರ ಮದುವೆಯಲ್ಲಿ ಬಡಿಸಿದ ಆಹಾರ ಪದಾರ್ಥಗಳ ದೀರ್ಘವಾದ ಪಟ್ಟಿಯಲ್ಲಿ ಭಾರತೀಯ ಮತ್ತು ಇಟಾಲಿಯನ್ ಪಾಕಪದ್ಧತಿಯ ಹಲವು ಪದಾರ್ಥಗಳನ್ನು ಒಳಗೊಂಡಿತ್ತು.
ವಿವಿಧ ರೀತಿಯ ಸಲಾಡ್ಗಳು, ರುಚಿಕರವಾದ ಸಿಹಿತಿಂಡಿಗಳು, ಪನೀರ್ ಕಡಾಹಿ, ವೆಜಿಟೇಬಲ್ ಝಲ್ಫ್ರೇಜಿ, ಚನ್ನಾ ಮಸಾಲಾ, ತಂದೂರಿ ಕುಲ್ಚ, ದಾಲ್ ಮಖಾನಿ ಮತ್ತು ನವರತನ್ ಬಿರಿಯಾನಿಯಂತಹ ಆರು ರೀತಿಯ ಸಲಾಡ್ಗಳನ್ನು ಒಳಗೊಂಡಿತ್ತು. ಮೂಂಗ್ ದಾಲ್ ಹಲ್ವಾ, ಶಾಹಿ ತುಕ್ರಾ, ಒಣ ಹಣ್ಣುಗಳ ಅಂಗೂರಿ, ರಸ್ಮಲೈ ಮತ್ತು ಇನ್ನೂ ಅನೇಕ ರುಚಿರುಚಿಯಾದ ತಿಂಡಿಗಳಿದ್ದವು.
ಅರವಿಂದ ಕೇಜ್ರಿವಾಲ್ ಭಗವಂತ್ ಮಾನ್ ಅವರ ಮುಂದಿನ ಜೀವನ ಪಯಣಕ್ಕೆ ಶುಭ ಹಾರೈಸಿದರು. ವೃತ್ತಿಯಲ್ಲಿ ವೈದ್ಯರಾಗಿರುವ ಗುರುಪ್ರೀತ್ ಕೌರ್ ಅವರನ್ನು ಮಾನ್ ವಿವಾಹವಾದರು.
2015ರಲ್ಲಿ ಮಾನ್ ತಮ್ಮ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ಗೆ ವಿಚ್ಛೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಸೀರತ್ ಕೌರ್ ಮಾನ್ (21) ಮತ್ತು ಮಗ ದಿಲ್ಶನ್ ಸಿಂಗ್ ಮಾನ್ (17). ಇಬ್ಬರೂ ಮಕ್ಕಳು ಮಾರ್ಚ್ನಲ್ಲಿ ನಡೆದ ಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.