ಚೆನ್ನೈನ 19 ವರ್ಷದ ಯುವಕ ಮಹಮ್ಮದ್ ಅಕ್ರಮ್ ತನ್ನ ಭಾಷಾ ಸಾಮರ್ಥ್ಯದಿಂದ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಅನೇಕರು ಅಸಾಧ್ಯವೆಂದು ಪರಿಗಣಿಸುವುದನ್ನು ಅವರು ಸಾಧಿಸಿದ್ದಾರೆ.
400 ಭಾಷೆಗಳಲ್ಲಿ ಬರೆಯುವ, ಓದುವ ಮತ್ತು ಟೈಪ್ ಮಾಡುವ ಸಾಮರ್ಥ್ಯ ಮತ್ತು 46 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಅಕ್ರಮ್‌ನ ಭಾಷೆಗಳ ಪ್ರಯಾಣವು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಸ್ವತಃ 16 ಭಾಷೆಗಳನ್ನು ಮಾತನಾಡುವ ತಂದೆ ಶಿಲ್ಬೀ ಮೊಝಿಪ್ಪಿಯಾನ್ ಮಾರ್ಗದರ್ಶನದಲ್ಲಿ ಈತನ ಭಾಷಾ ಕಲಿಕೆ ಆರಂಭವಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಜಾಗತಿಕ ಸಂವಹನಕ್ಕೆ ಇಂಗ್ಲಿಷ್ ಸಾಕಾಗುವುದಿಲ್ಲ ಎಂದು ನಂಬುವ ಈ ಯುವಕ, ತಮಿಳುನಾಡಿನ ಜನರು ಹೆಚ್ಚಿನ ಭಾಷೆಗಳನ್ನು ಕಲಿಯಲು ಪ್ರೇರೇಪಿಸಲು ಬಯಸುತ್ತಾನೆ.
ಕೇವಲ ಆರು ದಿನಗಳಲ್ಲಿ ಇಂಗ್ಲಿಷ್ ವರ್ಣಮಾಲೆಯನ್ನು ಮತ್ತು ಮೂರು ವಾರಗಳಲ್ಲಿ ತಮಿಳಿನ 299 ಅಕ್ಷರಗಳ ಲಿಪಿಯನ್ನು ಕಲಿತಾಗ ಅಕ್ರಮ್‌ನ ಅಸಾಧಾರಣ ಪ್ರತಿಭೆ ಬೆಳಕಿಗೆ ಬಂದಿತ್ತು.
ಕೇವಲ ಎಂಟು ವರ್ಷ ವಯಸ್ಸಿನಲ್ಲಿ, ಅಕ್ರಮ್ ಅತ್ಯಂತ ಕಿರಿಯ ಬಹುಭಾಷಾ ಟೈಪಿಸ್ಟ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದು, 12 ನೇ ವಯಸ್ಸಿನಲ್ಲಿ, ಅವನು 400 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಮೂಲಕ ಜರ್ಮನ್ ಭಾಷಾಶಾಸ್ತ್ರಜ್ಞರನ್ನು ಮೆಚ್ಚಿಸಿ ಮತ್ತೊಂದು ವಿಶ್ವ ದಾಖಲೆಯನ್ನು ಪಡೆದನು.
“ನನ್ನ ಕೆಲಸದ ಕಾರಣದಿಂದಾಗಿ ಇಸ್ರೇಲ್, ಸ್ಪೇನ್‌ನಂತಹ ಸ್ಥಳಗಳಿಗೆ ಹೋಗಬೇಕಾದಾಗ ನಾನು ನಿರ್ದಿಷ್ಟ ರಾಜ್ಯ ಅಥವಾ ದೇಶದ ಭಾಷೆ ಗೊತ್ತಿಲ್ಲದ ಕಾರಣ ಕಷ್ಟಪಟ್ಟಿದ್ದೆ” ಎಂದು ಯುವಕನ ತಂದೆ ಹೇಳಿಕೊಂಡಿದ್ದಾರೆ. ಇವರು ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದ್ದಾರೆ.
ಅಕ್ರಮ್‌ನ ಪ್ರಯಾಣವು ವಿಶ್ವಾದ್ಯಂತದ ಭಾಷಾಶಾಸ್ತ್ರಜ್ಞರು, ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ, ಬದ್ಧತೆ ಮತ್ತು ಉತ್ಸಾಹವು ಶಿಕ್ಷಣ ಮತ್ತು ಕಲಿಕೆಯಲ್ಲಿನ ಅಡೆತಡೆಗಳನ್ನು ಮುರಿಯಬಲ್ಲದು ಎಂದು ಸಾಬೀತುಪಡಿಸುತ್ತದೆ.
🚨 A 19-year-old Chennai boy, Mahmood Akram can read, write, and type in 400 languages and speak 46 languages fluently.
“In Tamil Nadu, many believe English is enough for global communication. I want to change that and encourage people to learn more languages,” says Mahmood… pic.twitter.com/BFsdYzKGzo
— Indian Tech & Infra (@IndianTechGuide) February 12, 2025