
ಈ ಬಾರಿಯ ಏಷ್ಯಾ ಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಇನ್ನೇನು ಕೊನೆ ಹಂತಕ್ಕೆ ತಲುಪಿದೆ ಇಂದು ಸೂಪರ್ 4ನ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಭಾರತ ಮತ್ತು ಶ್ರೀಲಂಕಾ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ.
ಭಾರತ ತಂಡದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಎರಡು ತಂಡಗಳು ಫೈನಲ್ ಪ್ರವೇಶಿಸಲು ಇಂದು ಕಾದಾಟ ನಡೆಸಲಿದ್ದು,ಮಳೆ ಅಡ್ಡಿ ಮಾಡದಿದ್ದರೆ ಸಾಕು ಎಂದು ಪ್ರೇಕ್ಷಕರು ಬೇಡಿಕೊಳ್ಳುತ್ತಿದ್ದಾರೆ.ಕಳೆದ ಪಂದ್ಯದಂತೆ ಈ ಮೈದಾನದಲ್ಲಿ ಇಂದು ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ.