ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಲವು ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಾಚರಣೆ ಸಾಗಿದೆ. ಹೀಗಿರುವಾಗ ಹಲವು ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ರೋಮೇನಿಯಾ ಅಥವಾ ಪೋಲೆಂಡ್ ಸೇರಲು ಪ್ರಯತ್ನಿಸುತ್ತಿದ್ದಾರೆ.
ಗಡಿ ದಾಟಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಉಕ್ರೇನ್ ಸೈನ್ಯ ದಾಳಿ ನಡೆಸುತ್ತಿದೆ. ನಮ್ಮನ್ನು ಥಳಿಸುತ್ತಿದೆ, ನಮ್ಮನ್ನು ಬೆದರಿಸಲು ನಮ್ಮೆಡೆಗೆ ವಾಹನಗಳನ್ನು ಓಡಿಸುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮನ್ನು ಉಕ್ರೇನ್ ದೇಶ ತೊರೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ.
BIG NEWS: ಲಾಸ್ಟ್ ಚಾನ್ಸ್ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್, ಮಹತ್ವದ ನಿರ್ಧಾರ ಕೈಗೊಂಡ ಉಕ್ರೇನ್; ಮಾತುಕತೆಗೆ ಬೆಲಾರಸ್ ಗೆ ನಿಯೋಗ
ಈ ವೇಳೆ ಹಲವಾರು ಭಾರತೀಯ ವಿದ್ಯಾರ್ಥಿಗಳು, ಅದರಲ್ಲಿ ಹೆಚ್ಚಿನವರು ಕೇರಳದ ವಿದ್ಯಾರ್ಥಿಗಳಿದ್ದಾರೆ. ಅವರ ಮೇಲೆ ಉಕ್ರೇನ್-ಪೋಲೆಂಡ್ ಗಡಿಯಲ್ಲಿರುವ ಶೆಹಿನಿಯಲ್ಲಿ ಉಕ್ರೇನಿಯನ್ ಪಡೆ ದಾಳಿ ನಡಸಿದೆ ಎಂದು ವರದಿಯಾಗಿದೆ.
ಇನ್ನು ಏಂಜೆಲ್ ಎಂಬ ಮಲಯಾಳಿ ವಿದ್ಯಾರ್ಥಿನಿ, ಉಕ್ರೇನ್ ಮಿಲಿಟರಿ ಮತ್ತು ಪೊಲೀಸರು ಅವರನ್ನು ಥಳಿಸುತ್ತಿದ್ದಾರೆ. ಉಕ್ರೇನ್ ನಿಂದ ಪೋಲೆಂಡ್‌ಗೆ ದಾಟಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಕಡೆಗೆ ವಾಹನಗಳನ್ನು ಓಡಿಸುತ್ತಿದ್ದಾರೆ. ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ತಾನು ಮಾಡಿದ ವಿಡಿಯೋದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನನ್ನನ್ನು ಸಹ ಮಿಲಿಟರಿ ಸಿಬ್ಬಂದಿ ಥಳಿಸಿ ರಸ್ತೆಗೆ ತಳ್ಳಿದರು. ಇದನ್ನು ವಿರೋಧಿಸಿದ ನನ್ನ ಸ್ನೇಹಿತನೊಬ್ಬನನ್ನು ಸಹ ಹೊಡೆದು ರಸ್ತೆಗೆ ತಳ್ಳಲಾಯಿತು ಎಂದು ಏಂಜಲ್ ಹೇಳಿದ್ದಾರೆ. ವಿದ್ಯಾರ್ಥಿಗಳು ವಿಪರೀತ ಚಳಿಯಲ್ಲಿ ಕಿಲೋಮೀಟರ್‌ಗಳಷ್ಟು ನಡೆದುಕೊಂಡು ಗಡಿ ಪ್ರದೇಶಗಳನ್ನು ತಲುಪಿದ್ದಾರೆ, ಈಗ ಅವರ ಬಳಿ ಸ್ವಲ್ಪವೇ ಆಹಾರ ಮತ್ತು ನೀರು ಉಳಿದಿದೆ ಎಂದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಯಭಾರ ಕಚೇರಿಯ ಅಧಿಕಾರಿಗಳ ನಿರ್ದೇಶನದಂತೆ ಮಾತ್ರ ಗಡಿಗಳಿಗೆ ತೆರಳುವಂತೆ ಕೇರಳ ಸರ್ಕಾರ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರೂ, ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಅನೇಕ ವಿದ್ಯಾರ್ಥಿಗಳು ತಾವಾಗಿಯೇ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.