ಕೆಲಸ ಮಾಡುವ ಸ್ಥಳಗಳಲ್ಲಿ ಸಿಬ್ಬಂದಿ ಒಂದತ್ತು ನಿಮಿಷಗಳವರೆಗೆ ವಿಶ್ರಾಂತಿ ಪಡೆಯಬಹುದು. ಆದರೆ, ನಿದ್ದೆ ಮಾಡಲು ಅವಕಾಶವಿದೆಯೇ ?
ಇಂತಹ ಯಾವುದೇ ಅವಕಾಶಗಳಿಲ್ಲ. ಒಂದು ವೇಳೆ, ಕೆಲಸ ಮಾಡುವ ಸಂದರ್ಭದಲ್ಲಿ ನಿದ್ದೆಗೆ ಜಾರಿದರೆ ಅದನ್ನೇ ಫೋಟೋ ತೆಗೆದುಕೊಂಡು ನಿದ್ದೆ ಮಾಡಿದ ಸಿಬ್ಬಂದಿಗೆ ಎಚ್ಚರಿಕೆ ಕೊಡುತ್ತಾರೆ ಅಥವಾ ನೊಟೀಸ್ ಜಾರಿ ಮಾಡುತ್ತಾರೆ.
ಕೆಲಸದ ಒತ್ತಡವನ್ನು ಗಮನಿಸಿದ ಬೆಂಗಳೂರು ಮೂಲದ ಸ್ಟಾರ್ಟಪ್ ವೇಕ್ ಫಿಟ್ ಎಂಬ ಕಂಪನಿ ತನ್ನ ಸಿಬ್ಬಂದಿಗೆ ಪ್ರತಿದಿನ ಮಧ್ಯಾಹ್ನ 2 ರಿಂದ 2.30 ರ ವರೆಗೆ ನಿದ್ದೆ ಮಾಡಲು ಅವಕಾಶವನ್ನು ನೀಡಿದೆ.
ಬುಲ್ಡೋಜರ್ ಆಕ್ಷನ್ ಗೆ ಹೆದರಿ ಓಡೋಡಿ ಬಂದು ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ
ಈ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೇ, ಈ ಸಮಯವನ್ನು ಅಧಿಕೃತ ನಿದ್ದೆ ಮಾಡುವ ಸಮಯ ಎಂದು ನಿಗದಿ ಮಾಡಲಾಗಿದೆ. ಸಿಬ್ಬಂದಿ ಈ ಅರ್ಧಗಂಟೆ ಕಾಲ ಕಿರುನಿದ್ದೆ ಮಾಡಲೆಂದೇ ಕಂಪನಿಯು “cozy nap pods” ಮತ್ತು “ನಿಶ್ಯಬ್ಧ ಕೊಠಡಿಗಳ’’ ವ್ಯವಸ್ಥೆಯನ್ನು ಕಲ್ಪಿಸಿದೆ.
ಈ ಸಂಬಂಧ ಕಂಪನಿಯ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಕಳುಹಿಸಿರುವ ಇಮೇಲ್ ಸಂದೇಶವನ್ನು ತನ್ನೆಲ್ಲಾ ಸಿಬ್ಬಂದಿಗೆ ಕಳುಹಿಸಿಕೊಟ್ಟಿದೆ. ಇದು ವಿಶ್ರಾಂತಿಯ ನಿರ್ಣಾಯಕ ಅಂಶವಾಗಿದ್ದು, ಮಧ್ಯಾಹ್ನದ ನಿದ್ದೆಗೆ ನ್ಯಾಯ ಸಲ್ಲಿಸುವ ಹಿನ್ನೆಲೆಯಲ್ಲಿ ಈ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ರಾಮಲಿಂಗೇಗೌಡರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಮಧ್ಯಾಹ್ನದ ನಿದ್ದೆಗೆ ಸಂಬಂಧಿಸಿದಂತೆ ನಾಸಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳು ನಡೆಸಿರುವ ಅಧ್ಯಯನದ ವರದಿಗಳನ್ನು ಅವರು ತಮ್ಮ ಇಮೇಲ್ ಸಂದೇಶದಲ್ಲಿ ಉಲ್ಲೇಖ ಮಾಡಿದ್ದಾರೆ. ಮಧ್ಯಾಹ್ನದ ಕಿರುನಿದ್ದೆಯು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.