
2024 ರ ಅಂತ್ಯದ ವೇಳೆಗೆ ಭಾರತವು ಅಮೆರಿಕಕ್ಕೆ ಸಮಾನವಾದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ
ನವದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (ಎಫ್‌ಐಸಿಸಿಐ) ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
“ನಾವು ದೇಶದಲ್ಲಿ ವಿಶ್ವ ಗುಣಮಟ್ಟದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದ್ದೇವೆ. 2024 ರ ಅಂತ್ಯದ ಮೊದಲು ನಮ್ಮ ರಸ್ತೆ ಮೂಲಸೌಕರ್ಯವು ಅಮೆರಿಕದ ಗುಣಮಟ್ಟಕ್ಕೆ ಸಮಾನವಾಗಿರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಸುಧಾರಿತ ರಸ್ತೆ ಮೂಲಸೌಕರ್ಯ ಮತ್ತು ಆಟೋಮೊಬೈಲ್‌ಗಳಿಗೆ ಸುಸ್ಥಿರ ಇಂಧನದ ಬಳಕೆಯು ರಫ್ತು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು.
“ಲಾಜಿಸ್ಟಿಕ್ ವೆಚ್ಚವು ಒಂದು ದೊಡ್ಡ ಸಮಸ್ಯೆಯಾಗಿದೆ, ಪ್ರಸ್ತುತ ಇದು ಜಿಡಿಪಿಯ ಶೇಕಡಾ 16ಕ್ಕೆ ಬರುತ್ತದೆ. 2024ರ ಅಂತ್ಯದ ವೇಳೆಗೆ ಈ ಅಂಕಿ ಅಂಶವು ಶೇಕಡಾ 9ಕ್ಕೆ ಇಳಿಯುತ್ತದೆ” ಎಂದು ಭರವಸೆ ನೀಡಿದರು.
“ಪರ್ಯಾಯ ಇಂಧನ ಪರಿಹಾರಗಳು ದೇಶದಾದ್ಯಂತ ಬೃಹತ್ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತವೆ. ಉತ್ಪಾದಿಸುವ ಒಟ್ಟು ವಿತರಣಾ ಶಕ್ತಿಯ ಪೈಕಿ 38 ಪ್ರತಿಶತದಷ್ಟು ವಿದ್ಯುತ್ ಸೌರಶಕ್ತಿಯಿಂದ ಉತ್ಪತ್ತಿಯಾಗುತ್ತದೆ. ಇದನ್ನು ಶೇಕಡಾ 60 ಕ್ಕೆ ಗುರಿಪಡಿಸಲಾಗಿದೆ” ಎಂದು ಸಚಿವರು ಹೇಳಿದರು.