alex Certify ಮತ್ತೊಂದು ಮಹತ್ವದ ಸುಧಾರಣೆ ಕೈಗೊಂಡ ರೈಲ್ವೇ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಮಹತ್ವದ ಸುಧಾರಣೆ ಕೈಗೊಂಡ ರೈಲ್ವೇ ಇಲಾಖೆ

ಕೊರೊನಾ ವೈರಸ್​ನಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿಡುವ ಸಲುವಾಗಿ ರೈಲು ಬೋಗಿಗಳ ಸ್ವಚ್ಚತೆ ಕಡೆಗೆ ಉತ್ತರ ರೈಲ್ವೆ ಇಲಾಖೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ರೈಲಿನ ಕೋಚ್ ​ಗಳ ಸ್ವಚ್ಛತೆಗಾಗಿ ರೋಬೋಟ್​ ಗಳು ಹಾಗೂ ಯುವಿಸಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜುಲೈ ತಿಂಗಳಿನಿಂದ ಲಖ್ನೌ – ಶತಾಬ್ದಿ ವಿಶೇಷ ರೈಲಿನಲ್ಲಿ ಯುವಿಸಿ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ನೀಡಲಾಗಿದ್ದು, ಉತ್ತರ ರೈಲ್ವೆ ಇಲಾಖೆಯು ಬೋಗಿಗಳನ್ನು ಸ್ವಚ್ಛಗೊಳಿಸಲು ಯುವಿಸಿ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಉತ್ತರ ರೈಲ್ವೆ ಜನರಲ್​ ಮ್ಯಾನೇಜರ್​ ಆಶುತೋಷ್​​ ಗಂಗಾಲ್​ ಮಾಹಿತಿ ನೀಡಿದ್ರು. ಈ ಯಂತ್ರವನ್ನು ಬಳಸಿ ರಿಮೋಟ್​ ಕಂಟ್ರೋಲ್​ನ ಸಹಾಯದಿಂದ ಸಂಪೂರ್ಣ ರೈಲನ್ನು ಸೋಂಕುರಹಿತ ಮಾಡಬಹುದಾಗಿದೆ ಎಂದು ಅವರು ಹೇಳಿದ್ರು.

ಯುವಿಸಿ ತಂತ್ರಜ್ಞಾನವು ಸಂಪೂರ್ಣ ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಆಗಿದೆ. ಯಂತ್ರ ಕಾರ್ಯ ನಿರ್ವಹಿಸುವ ವೇಳೆ ಮನುಷ್ಯರ ಸಹಾಯ ಬೇಕಾಗುವುದಿಲ್ಲ. ಮಷಿನ್​​ಗಳನ್ನು ಬಳಸಿ ಬೋಗಿಯನ್ನು ಸ್ವಚ್ಛ ಮಾಡುವುದು ಕೂಡ ಸುಲಭದ ಕೆಲಸವಾಗಿದೆ. ಈ ಪ್ರಯತ್ನಕ್ಕೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಗಂಗಾಲ್​ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...