ಭಾರತೀಯ ರೈಲ್ವೇ ತನ್ನೆಲ್ಲಾ ರೈಲುಗಳಲ್ಲಿ ಫೆಬ್ರವರಿ 14ರಿಂದ ಸಿದ್ಧಪಡಿಸಿದ ಆಹಾರದ ಪೂರೈಕೆಗೆ ಮರುಚಾಲನೆ ನೀಡಲು ನಿರ್ಧರಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಐಆರ್ಸಿಟಿಸಿಯ ಅಧಿಕೃತ ಜಾಲತಾಣದ ಮೂಲಕ ನಿಮ್ಮ ಫುಡ್ ಆರ್ಡರ್ ಮುಂದಿಡುವುದು ಹೀಗೆ:
Good News: ಮಧ್ಯಮ ವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣ
1. ಐಆರ್ಸಿಟಿಸಿಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ — https://www.ecatering.irctc.co.in/.
2. ನಿಮ್ಮ 10 ಅಂಕಿಯ ಪಿಎನ್ಆರ್ ಸಂಖ್ಯೆ ಎಂಟರ್ ಮಾಡಿ, ಮುಂದುವರೆಯಲು ಬಾಣವೊಂದನ್ನು ಕ್ಲಿಕ್ ಮಾಡಿ.
3. ಲಭ್ಯವಿರುವ ಕೆಫೆಗಳು, ಔಟ್ಲೆಟ್ಗಳು ಹಾಗೂ ತ್ವರಿತ ಸೇವಾ ರೆಸ್ಟೋರೆಂಟ್ಗಳಲ್ಲಿ ಆಹಾರವನ್ನು ಆಯ್ಕೆ ಮಾಡಿ.
4. ಆರ್ಡರ್ ಮುಂದಿಟ್ಟು, ಪೇಮೆಂಟ್ ಮೋಡ್ ಆಯ್ಕೆ ಮಾಡಿ. ಆನ್ಲೈನ್ ಪಾವತಿ ಅಥವಾ ಕ್ಯಾಶ್ ಆನ್ ಡೆಲಿವರಿಯನ್ನು ಆಯ್ಕೆ ಮಾಡಬಹುದು.
5. ಒಮ್ಮೆ ಆರ್ಡರ್ ಮುಂದಿಟ್ಟ ಬಳಿಕ, ನಿಮ್ಮ ಸೀಟ್ ಗೆ ಆಹಾರ ಒದಗಿಸಲಾಗುತ್ತದೆ.