ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನು ಒಂದು ವಾರಗಳ ಕಾಲ, ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಕೊರೊನಾ ನಂತ್ರ ವ್ಯವಸ್ಥೆಯನ್ನು ಸುಧಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೇ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು ಒಂದು ವಾರಗಳ ಕಾಲ ನಿಶ್ಚಿತ ಅವಧಿಗೆ ಬಂದ್ ಮಾಡಲಿದೆ. ರಾತ್ರಿ 6 ಗಂಟೆ ಈ ಸೇವೆ ಬಂದ್ ಆಗಲಿದೆ. ಇದ್ರಿಂದಾಗಿ ಆ ಅವಧಿಯಲ್ಲಿ ಟಿಕೆಟ್ ಬುಕ್ಕಿಂಗ್ ಸಾಧ್ಯವಾಗುವುದಿಲ್ಲ.
ಮಹಿಳೆಗೆ ಬ್ಲಾಕ್ ಮೇಲ್; ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅರೆಸ್ಟ್
ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಈ ಸಮಯದಲ್ಲಿ ಪಿಆರ್ಎಸ್ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಚಾರಣಾ ಸೇವೆಗಳು ತೆರೆದಿರಲಿವೆ. ಅದಕ್ಕೆ ಯಾವುದೇ ಅಡೆತಡೆಯಾಗುವುದಿಲ್ಲ. ಆದ್ರೆ ರಾತ್ರಿ ಸಮಯದಲ್ಲಿ ರೈಲ್ವೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.
ನವೆಂಬರ್ 15ರ ಮಧ್ಯರಾತ್ರಿಯಿಂದ ಈ ಸುಧಾರಣಾ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 20 ಮತ್ತು 21 ರ ರಾತ್ರಿ 11.30ರಿಂದ ಬೆಳಿಗ್ಗೆ 5.30ರವರೆಗೆ ಕೆಲಸ ನಡೆಯಲಿದೆ. ಈ 6 ಗಂಟೆಗಳ ಅವಧಿಯಲ್ಲಿ ಯಾವುದೇ ಪಿ ಆರ್ ಎಸ್ ಸೇವೆಗಳು ಲಭ್ಯವಿರುವುದಿಲ್ಲ.