ಕೇರಳದಲ್ಲಿ ʼವಂದೇ ಭಾರತ್ ಎಕ್ಸ್ ಪ್ರೆಸ್ʼ ರೈಲಿನ ಮೊದಲ ಪ್ರಾಯೋಗಿಕ ಚಾಲನೆಯಲ್ಲಿ ಎರಡು ನಿಮಿಷಗಳ ಕಾಲ ತಡವಾದ ಕಾರಣ ಲೋಕೋ ಪೈಲಟನ್ನ ಭಾರತೀಯ ರೈಲ್ವೆ ಅಮಾನತುಗೊಳಿಸಿದೆ.
ಆದಾಗ್ಯೂ ಕಾರ್ಮಿಕ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದ ನಂತರ ಅಮಾನತು ಹಿಂಪಡೆಯಲಾಗಿದೆ. ವಯನಾಡ್ ಎಕ್ಸ್ ಪ್ರೆಸ್ಗೆ ಮೊದಲ ಸಿಗ್ನಲ್ ನೀಡಿದ ನಂತರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪಿರವಂ ನಿಲ್ದಾಣದಲ್ಲಿ ಎರಡು ನಿಮಿಷಗಳ ಹೆಚ್ಚಿನ ಕಾಲ ನಿಂತಿತ್ತು.
ವಯನಾಡ್ ಎಕ್ಸ್ ಪ್ರೆಸ್ ಮತ್ತು ವಂದೇ ಭಾರತ್ ರೈಲುಗಳು ಒಂದೇ ಸಮಯದಲ್ಲಿ ಪಿರವಂ ನಿಲ್ದಾಣಕ್ಕೆ ಬಂದವು. ಪರಿಣಾಮವಾಗಿ ವಯನಾಡ್ ಎಕ್ಸ್ ಪ್ರೆಸ್ ಅನ್ನು ಮೊದಲು ಹೋಗಲು ಅಧಿಕಾರಿ ಹಸಿರು ಸಿಗ್ನಲ್ ನೀಡಿದರು. ಇದರಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಾಯೋಗಿಕ ಚಾಲನೆಯಲ್ಲಿ ಸ್ವಲ್ಪ ವಿಳಂಬವಾಯಿತು. ಇದರಿಂದ ವಂದೇ ಭಾರತ್ ರೈಲು ಎರಡು ನಿಮಿಷ ತಡವಾಯಿತು.
ಈ ಘಟನೆಯಿದಾಗಿ ಹಿರಿಯ ರೈಲ್ವೆ ಉದ್ಯೋಗಿ ಹಾಗೂ ರೈಲ್ವೆ ನಿಯಂತ್ರಕ ಕುಮಾರ್ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಇದು ಚರ್ಚೆಗೆ ಗ್ರಾಸವಾದ ನಂತರ ಮತ್ತು ಕಾರ್ಮಿಕ ಸಂಘಟನೆಗಳು ಮಧ್ಯಪ್ರವೇಶಿಸಿದ ನಂತರ ಅಮಾನತು ಹಿಂತೆಗೆದುಕೊಳ್ಳಲಾಗಿದೆ.
ವಂದೇ ಭಾರತ್ ರೈಲನ್ನು ವೇಗಗೊಳಿಸಲು ಭಾರತೀಯ ರೈಲ್ವೆಯು ಕೇರಳದಲ್ಲಿ ಸಿಗ್ನಲಿಂಗ್ ಮತ್ತು ರೈಲು ಮೂಲಸೌಕರ್ಯವನ್ನು ಗಣನೀಯವಾಗಿ ನವೀಕರಿಸಲು ಯೋಜಿಸಿದೆ. ಕೇರಳದ ಮೊದಲ ವಂದೇ ಭಾರತ್ ರೈಲು ಸೇವೆಯನ್ನು ಕಾಸರಗೋಡಿನವರೆಗೆ ವಿಸ್ತರಿಸಲಾಗಿದೆ
ಏಪ್ರಿಲ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಲಿರುವ ಕೇರಳದ ಮೊದಲ ʼವಂದೇ ಭಾರತ್ ಎಕ್ಸ್ ಪ್ರೆಸ್ʼ ಕಾಸರಗೋಡಿನಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಆರಂಭದಲ್ಲಿ ಈ ರೈಲನ್ನು ತಿರುವನಂತಪುರಂ ಮತ್ತು ಕಣ್ಣೂರು ನಡುವೆ ಓಡಿಸಲು ಯೋಜಿಸಲಾಗಿತ್ತು.