ನವದೆಹಲಿ: ರೈಲ್ವೆ ಸಚಿವಾಲಯದ ಪ್ರಕಾರ ನವೆಂಬರ್ 4, 2024 ರಂದು ಭಾರತೀಯ ರೈಲ್ವೇ ಒಂದೇ ದಿನದಲ್ಲಿ 3 ಕೋಟಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ಗಮನಾರ್ಹ ದಾಖಲೆಯನ್ನು ಮಾಡಿದೆ.
ಈ ಅಭೂತಪೂರ್ವ ಮೈಲಿಗಲ್ಲು ಭಾರತದ ಸಾರಿಗೆ ಅಗತ್ಯಗಳನ್ನು ಪೂರೈಸಲು ವಿಶೇಷವಾಗಿ ಹಬ್ಬದ ಋತುಗಳಲ್ಲಿ ಭಾರತೀಯ ರೈಲ್ವೇಯ ಸಾಮರ್ಥ್ಯ ಮತ್ತು ಬದ್ಧತೆಯನ್ನು ತಿಳಿಸುವಂತಿದೆ.
ನವೆಂಬರ್ 4ರ ಪ್ರಯಾಣಿಕರ ಸಂಖ್ಯೆಗಳು
ಉಪನಗರವಲ್ಲದ ಪ್ರಯಾಣಿಕರು: 120.72 ಲಕ್ಷ,
19.43 ಲಕ್ಷ ಟಿಕೆಟ್ ಕಾಯ್ದಿರಿಸಲಾಗಿದೆ ಮತ್ತು 101.29 ಲಕ್ಷ ಟಿಕೆಟ್ ಕಾಯ್ದಿರಿಸಲಾಗಿಲ್ಲ.
ಉಪನಗರ ಪ್ರಯಾಣಿಕರು: 180 ಲಕ್ಷ
ಒಟ್ಟು ಪ್ರಯಾಣಿಕರ ಸಂಖ್ಯೆ: 3 ಕೋಟಿಗೂ ಹೆಚ್ಚು.
ಇದು 2024 ರ ಅತಿ ಹೆಚ್ಚು ಏಕದಿನ ಪ್ರಯಾಣಿಕರ ಸಂಖ್ಯಯಾಗಿದೆ.
ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗೆ ಭಾರಿ ಪ್ರಯಾಣದ ಬೇಡಿಕೆ
ಅಕ್ಟೋಬರ್ 1 ಮತ್ತು ನವೆಂಬರ್ 5 ರ ನಡುವೆ ಸುಮಾರು 6.85 ಕೋಟಿ ಪ್ರಯಾಣಿಕರು ಭಾರತೀಯ ರೈಲ್ವೆಯಲ್ಲಿ ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ. ಈ ಬೃಹತ್ ಅಂಕಿ-ಅಂಶವು ಪ್ರಮುಖ ಹಬ್ಬಗಳ ಸಮಯದಲ್ಲಿ ರೈಲ್ವೆಯ ನಿರ್ಣಾಯಕ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾರತೀಯ ರೈಲ್ವೆ ಒದಗಿಸಿದ ಸಾರಿಗೆಯ ಪ್ರಮಾಣವನ್ನು ಎತ್ತಿ ತೋರಿಸುತ್ತದೆ.
ಹಬ್ಬದ ರಶ್ ನಿರ್ವಹಿಸಲು ವಿಶೇಷ ರೈಲುಗಳು
ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಭಾರತೀಯ ರೈಲ್ವೆಯು ಅಕ್ಟೋಬರ್ 1 ಮತ್ತು ನವೆಂಬರ್ 5 ರ ನಡುವೆ 4,521 ವಿಶೇಷ ರೈಲುಗಳನ್ನು ಓಡಿಸಿದೆ. 65 ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದೆ. ಈ ಕ್ರಮದಿಂದ ಹಬ್ಬ ಆಚರಣೆಗಳಿಗಾಗಿ ತಮ್ಮ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ.
ಬೇಡಿಕೆಯನ್ನು ಮತ್ತಷ್ಟು ಪೂರೈಸಲು, ಭಾರತೀಯ ರೈಲ್ವೇ ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ 7,724 ವಿಶೇಷ ರೈಲುಗಳನ್ನು ಘೋಷಿಸಿತು, ಕಳೆದ ವರ್ಷದ ಸೇವೆಗಳಿಗೆ ಹೋಲಿಸಿದರೆ 73% ಹೆಚ್ಚಳವಾಗಿದೆ.
ಹಬ್ಬದ ನಂತರದ ರಿಟರ್ನ್ ಜರ್ನಿಗಾಗಿ ತಯಾರಿ
ಛತ್ ಪೂಜೆಯ ಅಂತ್ಯದೊಂದಿಗೆ, ಭಾರತೀಯ ರೈಲ್ವೇಯು ನವೆಂಬರ್ 8 ರಂದು ಹಿಂದಿರುಗುವ ರಶ್‌ಗೆ ತಯಾರಿ ನಡೆಸುತ್ತಿದೆ. ಹಿಂದಿರುಗುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಂಡಿದೆ. ನವೆಂಬರ್ 8 ರಂದು 164 ವಿಶೇಷ ರೈಲುಗಳು ಓಡಲಿವೆ, ನವೆಂಬರ್ 9, 10 ಮತ್ತು 11 ರಂದು ಕೂಡ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.
ನವೆಂಬರ್ 8 ರ ನಂತರ, ಭಾರತೀಯ ರೈಲ್ವೆಯು ನವೆಂಬರ್ 9 ಕ್ಕೆ 160 ರೈಲುಗಳನ್ನು, ನವೆಂಬರ್ 10 ಕ್ಕೆ 161 ಮತ್ತು ನವೆಂಬರ್ 11 ಕ್ಕೆ 155 ರೈಲುಗಳನ್ನು ನಿಗದಿಪಡಿಸಿದೆ.