ರೈಲು ಪ್ರಯಾಣಿಕರಿಗೆ ಐಆರ್ಸಿಟಿಸಿ ಖುಷಿ ಸುದ್ದಿ ನೀಡಿದೆ. ರೈಲು ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರು ಮರುಪಾವತಿಗಾಗಿ ದೀರ್ಘಕಾಲ ಕಾಯಬೇಕಾಗಿಲ್ಲ. ತ್ವರಿತ ಹಣ ಪಾವತಿಗೆ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಐಆರ್ಸಿಟಿಸಿ ಐಪೇ ಹೆಸರಿನಲ್ಲಿ ಪಾವತಿ ಗೇಟ್‌ವೇ ಪ್ರಾರಂಭಿಸಿದೆ.
ಐಆರ್ಸಿಟಿಸಿ ಐಪೇ ಅಪ್ಲಿಕೇಶನ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದು ಸಮಯವನ್ನು ಉಳಿಸುತ್ತದೆ. ಟಿಕೆಟ್ ರದ್ದುಗೊಂಡ ತಕ್ಷಣ, ಐಆರ್ಸಿಟಿಸಿ ಐಪೇ ಅಪ್ಲಿಕೇಶನ್ ಮೂಲಕ ತಕ್ಷಣ ಖಾತೆಗೆ ಹಣ ಜಮಾ ಆಗಲಿದೆ,
ಐಆರ್ಸಿಟಿಸಿ ಐಪೇ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಮೊದಲು www.irctc.co.in ಗೆ ಲಾಗಿನ್ ಮಾಡಬೇಕು. ಅಲ್ಲಿ ಸ್ಥಳ ಮತ್ತು ದಿನಾಂಕದಂತಹ ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಬೇಕು. ಮಾರ್ಗದ ಪ್ರಕಾರ ರೈಲನ್ನು ಆಯ್ಕೆ ಮಾಡಬೇಕು. ಟಿಕೆಟ್ ಬುಕ್ ಮಾಡುವಾಗ, ಪಾವತಿ ವಿಧಾನದಲ್ಲಿ IRCTC iPay ಆಯ್ಕೆ ಆರಿಸಬೇಕು. ಅಲ್ಲಿ ಹಣ ಪಾವತಿ ಮಾಡಬೇಕು. ಪಾವತಿಗಾಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ವಿವರಗಳನ್ನು ಭರ್ತಿ ಮಾಡಬೇಕು. ಇದರ ನಂತರ ನಿಮ್ಮ ಟಿಕೆಟ್ ಬುಕ್ ಆಗುತ್ತದೆ. ಟಿಕೆಟ್ ಬುಕ್ ಆದ ಬಗ್ಗೆ ಎಸ್ ಎಂಎಸ್ ಬರುತ್ತದೆ.
ಟಿಕೆಟ್ ಬುಕ್ ಮಾಡಿದಂತೆ ಟಿಕೆಟ್ ರದ್ದು ಪಡಿಸಿದಾಗ್ಲೂ ಈ ಅಪ್ಲಿಕೇಷನ್ ಮೂಲಕವೇ ಹಣ ತಕ್ಷಣ ನಿಮ್ಮ ಖಾತೆಗೆ ಸೇರುತ್ತದೆ.