ಕೋವಿಡ್ ಕಾರಣದಿಂದಾಗಿ ರೈಲುಗಳಲ್ಲಿ ಹಾಸಿಗೆಗಳು ಹಾಗೂ ಬ್ಲಾಂಕೆಟ್‌ಗಳ ಸೇವೆಯನ್ನು ನಿಲ್ಲಿಸಿದ್ದ ಭಾರತೀಯ ರೈಲ್ವೇ ಇದೀಗ ಈ ಸೇವೆಗಳನ್ನು ಮರು ಆರಂಭ ಮಾಡುತ್ತಿದೆ.
ರೈಲುಗಳ ಎಸಿ ಕೋಚ್‌ಗಳಿಗೆ ಮೇಲ್ಕಂಡ ಸೇವೆಗಳನ್ನು ಕೊಡಲಾಗುತ್ತದೆ. ಕೋವಿಡ್-19 ಸೋಂಕು ಹಬ್ಬುವುದರ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಲೈನೆನ್ ಮತ್ತು ಬ್ಲಾಂಕೆಟ್‌ಗಳನ್ನು ಪ್ರಯಾಣಿಕರಿಗೆ ನೀಡುವುದನ್ನು ಭಾರತಿಯ ರೈಲ್ವೇ ಈ ಹಿಂದೆ ನಿಲ್ಲಿಸಿತ್ತು. ಇದೇ ವೇಳೆ ಉಚಿತ ಹಾಸಿಗೆಗಳ ಬದಲಿಗೆ ಬಳಸಿ ಬಿಸಾಡಬಲ್ಲ ಬೆಡ್‌ರೋಲ್ ಕಿಟ್‌ಗಳನ್ನು ರೈಲ್ವೇ ಮಾರಾಟ ಮಾಡಲು ಮುಂದಾಗಿತ್ತು.
ಮುಂಬೈನಲ್ಲಿ ಭಾರಿ ಮಳೆಯ ಮಧ್ಯೆ ಓಡಾಡುತ್ತಿದ್ದ ಚಿರತೆ ಮರಿ ರಕ್ಷಣೆ
ಇದರೊಂದಿಗೆ ಸಾಮೂಹಿಕ ಬುಕಿಂಗ್‌ಗಾಗಿ ಇದ್ದ ಪ್ರಕ್ರಿಯೆಗಳನ್ನು ರೈಲ್ವೇ ಇನ್ನಷ್ಟು ಸರಳಗೊಳಿಸಿದೆ. ಈ ಮೂಲಕ ಇಡೀ ರೈಲು ಅಥವಾ ಇಡೀ ಕೋಚ್ ಅನ್ನು ಬುಕ್ಕಿಂಗ್ ಮಾಡುವುದನ್ನು ಸುಲಭಗೊಳಿಸಲಾಗಿದೆ.
ವರದಿಗಳ ಪ್ರಕಾರ, ಮದುವೆಗಾಗಿ ರೈಲನ್ನು ಬುಕ್ ಮಾಡಲು, ನೀವು ಐಆರ್‌ಸಿಟಿಸಿ ಜಾಲತಾಣಕ್ಕೆ ಭೇಟಿ ಕೊಡಬೇಕು. ಈ ವೇಳೆ, ಪ್ರತಿ ಟಿಕೆಟ್‌ಗೆ ಅದರ ಮೂಲ ದರದ 30% ಹೆಚ್ಚಿನ ದುಡ್ಡು ಪಾವತಿ ಮಾಡಬೇಕು. ಅಲ್ಲದೇ ಠೇವಣಿ ಹಣವನ್ನೂ ಸಹ ಮುಂಗಡ ಪಾವತಿ ಮಾಡಿ, ಪಯಣ ಪೂರ್ಣಗೊಂಡ ಬಳಿಕ ಮರಳಿ ಪಡೆಯಬಹುದು. ಸೇವಾ ತೆರಿಗೆ, ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳನ್ನು ಈ ಮೊತ್ತ ಒಳಗೊಂಡಿರುವುದಿಲ್ಲ.