ಭಾರತೀಯ ರೈಲ್ವೆಯ ನೇಮಕಾತಿ ಕೋಶದಿಂದ ವಿವಿಧ ವಿಭಾಗಗಳಲ್ಲಿ 1600 ಕ್ಕೂ ಅಧಿಕ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತೀಯ ರೈಲ್ವೇ ಅಧಿಸೂಚನೆಯಲ್ಲಿ ಉತ್ತರ ಮಧ್ಯ ರೈಲ್ವೇ ಆಯ್ದ ಅಭ್ಯರ್ಥಿಗಳಿಗೆ ವಿವಿಧ ವಿಭಾಗಗಳು ಮತ್ತು ಕಾರ್ಯಾಗಾರಗಳಲ್ಲಿ ತರಬೇತಿ ನೀಡಲಿದೆ ಎಂದು ಹೇಳಿದೆ.
ಆಸಕ್ತ ಅಭ್ಯರ್ಥಿಗಳು 1664 ಅಪ್ರೆಂಟಿಸ್ ಹುದ್ದೆಗಳಿಗೆ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ rrcpryi.org ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಆಗಸ್ಟ್ 2 ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 1 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ವೇತನ
1 ನೇ ಹಂತದ ಹುದ್ದೆಗಳಲ್ಲಿ ನೇರ ನೇಮಕಾತಿಯ ಸಂದರ್ಭದಲ್ಲಿ ಶೇಕಡ 20 ರಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಇದರ ವೇತನ ಶ್ರೇಣಿ 18,000 ರಿಂದ 56,900 ವರೆಗೆ ಇದೆ.
ವಯೋಮಿತಿ
ಆಯ್ಕೆಯಾದ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿರಬೇಕು. 2021 ರ ಸೆಪ್ಟೆಂಬರ್ 1 ರ ವೇಳೆಗೆ 24 ವರ್ಷಗಳ ಒಳಗಿರಬೇಕು. ವಯೋಮಿತಿಯಲ್ಲಿ ಸಡಿಲಿಕೆಗಳನ್ನು ಸಂಬಂಧಿತ ಕಾನೂನುಗಳಿಗೆ ಅನುಸಾರವಾಗಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಕನಿಷ್ಠ ಶೇಕಡ 50 ಅಂಕಗಳೊಂದಿಗೆ 10+2, ಮೆಟ್ರಿಕ್ಯುಲೇಷನ್(10 ನೇ ತರಗತಿ) ಉತ್ತೀರ್ಣರಾಗಿರಬೇಕು. ಐಟಿಐ ಪ್ರಮಾಣಪತ್ರಗಳೊಂದಿಗೆ 8 ನೇ ತರಗತಿ ಉತ್ತೀರ್ಣರಾದ ಎಲ್ಲ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.