ಅನಂತ್ ರೂಪನಗುಡಿ ಎಂಬ ಭಾರತೀಯ ರೈಲ್ವೇ ಅಧಿಕಾರಿಯೊಬ್ಬರು ತಮ್ಮ ಕಿರಿಯ ಸಹೋದ್ಯೋಗಿಯ ಉದ್ಯಾನದ ಕೆಲವು ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅನಂತ್ ರೂಪನಗುಡಿ ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಅದ್ಭುತ ಉದ್ಯಾನವನವನ್ನು ಈ ಚಿತ್ರದಲ್ಲಿ ನೋಡಬಹುದು. ಲಖನೌದ ರೂಪನಗುಡಿಯಲ್ಲಿ ಈ ಸುಂದರ ಉದ್ಯಾನ ರೂಪಿಸಲಾಗಿದೆ. ಇಲ್ಲಿ ಹಲವಾರು ಆಕರ್ಷಕ ಬಣ್ಣಬಣ್ಣದ ಹೂವುಗಳಿಂದ ಕಣ್ಮನ ಸೆಳೆಯುತ್ತದೆ. ಪ್ರಕಾಶಮಾನವಾದ ಹಳದಿ ಬಣ್ಣದಿಂದ ರೋಮಾಂಚಕ ನೇರಳೆ ಬಣ್ಣದವರೆಗೆ ಉದ್ಯಾನದಲ್ಲಿ ಎಲ್ಲವೂ ಇದೆ.
ವೈವಿಧ್ಯಮಯ ಹೂವುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಇದು ಎಂಥವರನ್ನೂ ಮೋಡಿ ಮಾಡಬಲ್ಲದು. ಲಖನೌದಲ್ಲಿ ನನ್ನ ಕಿರಿಯ ಸಹೋದ್ಯೋಗಿಯ ಉದ್ಯಾನವನ ಇದಾಗಿದೆ. ತೋಟಗಾರಿಕೆಯಲ್ಲಿ ಅವರ ಉತ್ಸಾಹ ಮತ್ತು ಹೂವುಗಳ ಮೇಲಿನ ಪ್ರೀತಿಯನ್ನು ಇದು ತೋರಿಸುತ್ತದೆ, ಮಾತ್ರವಲ್ಲದೇ ಅತ್ಯುತ್ತಮ ಬಣ್ಣಗಳ ಆಯ್ಕೆ ಅವರ ಸೌಂದರ್ಯದ ಪ್ರಜ್ಞೆಯನ್ನು ತೋರಿಸುತ್ತದೆ ಎಂದು ಅನಂತ್ ರೂಪನಗುಡಿ ಹೇಳಿದ್ದಾರೆ.