alex Certify BIG NEWS: ರೈಲ್ವೇ ಖಾಸಗೀಕರಣ ವದಂತಿ ನಡುವೆ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈಲ್ವೇ ಖಾಸಗೀಕರಣ ವದಂತಿ ನಡುವೆ ಮಹತ್ವದ ಘೋಷಣೆ

ನವದೆಹಲಿ: ಭಾರತೀಯ ರೈಲ್ವೇ ಖಾಸಗೀಕರಣ, ಹೂಡಿಕೆ ಹಿಂಪಡೆಯುವಿಕೆ ವದಂತಿ ನಡುವೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡಿದ್ದು, ಭಾರತೀಯ ರೈಲ್ವೇ ಮಾರಾಟಕ್ಕಿಲ್ಲ, ಖಾಸಗೀಕರಣ ಮಾಡುವುದಿಲ್ಲ: ಹೇಳಿದ್ದಾರೆ.

ರೈಲ್ವೇ ಖಾಸಗೀಕರಣ ವದಂತಿಗಳ ಮಧ್ಯೆ ಭಾರತೀಯ ರೈಲ್ವೇ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದ  ಅವರು, ಐಕಾನಿಕ್ ರಾಷ್ಟ್ರೀಯ ಸಾರಿಗೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಮುಂದೆಯೂ ಖಾಸಗೀಕರಣದಂತಹ ನಡೆ ಅನುಸರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರೈಲ್ವೇ ಖಾಸಗೀಕರಣ, ಬಂಡವಾಳ ಹಿಂಪಡೆಯುವಂತಹ ಯಾವುದೇ ಯೋಜನೆ ಹೊಂದಿಲ್ಲ. ಏಕೆಂದರೆ ಇದು ಬೃಹತ್ ಮತ್ತು ಅತ್ಯಂತ ಸಂಕೀರ್ಣವಾದ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದ್ದಾರೆ.

ರೈಲ್ವೇ ಇಲಾಖೆ ಹಿಂದಿನ ಸಚಿವ ಪಿಯೂಷ್ ಗೋಯಲ್ ಕೂಡ ರೈಲ್ವೇ ಎಂದಿಗೂ ಖಾಸಗಿ ಕೈಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರೈಲ್ವೆ ಭಾರತದ ಆಸ್ತಿ ಮತ್ತು ಅದನ್ನು ಎಂದಿಗೂ ಖಾಸಗೀಕರಣ ಮಾಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಇದು ಪ್ರತಿಯೊಬ್ಬ ಭಾರತೀಯನ ಆಸ್ತಿ ಮತ್ತು ಅದು ಹಾಗೆಯೇ ಉಳಿಯುತ್ತದೆ ಎಂದು ಅವರು ಹೇಳಿದ್ದು, ಆದಾಗ್ಯೂ, ಭಾರತೀಯ ರೈಲ್ವೇಯ ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ, ವೈಷ್ಣವ್ ಅವರು ಈ ವಿಷಯದ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿ, ಬಂಡವಾಳ ನಿಧಿಯಲ್ಲಿನ ಅಂತರವನ್ನು ಕಡಿಮೆ ಮಾಡಲು, ನೆಟ್‌ ವರ್ಕ್‌ ನ ತ್ವರಿತ ಅಭಿವೃದ್ಧಿ, ರೋಲಿಂಗ್ ಸ್ಟಾಕ್‌ಗಳ ತಯಾರಿಕೆಗೆ ಅನುಕೂಲವಾಗುವಂತೆ ಪ್ರಯಾಣಿಕ ಮತ್ತು ಸರಕು ಸೇವೆಗಳ ವಿತರಣೆಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿದ್ದರು.

2018 ಮತ್ತು 2030ರ ನಡುವೆ ರೈಲ್ವೇ ಮೂಲಸೌಕರ್ಯಕ್ಕೆ 50 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಅಗತ್ಯವಿದೆ ಎಂದು ಅವರು ಹೇಳಿದ್ದು, ಪ್ರಯಾಣಿಕರಿಗೆ ಸುಧಾರಿತ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆಯ್ದ ಮಾರ್ಗಗಳಲ್ಲಿ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಆಧುನಿಕ ರೇಕ್‌ ಗಳನ್ನು ಅಳವಡಿಸಲು ಪಿಪಿಪಿ ಮೋಡ್ ಅನ್ನು ಬಳಸುವ ಪ್ರಸ್ತಾಪವಿದೆ ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...