ಭಾರತೀಯ ರೈಲ್ವೆಯ, ಪ್ರವಾಸೋದ್ಯಮ ವಿಭಾಗ ಹೊಸವರ್ಷಕ್ಕೆ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ತಿರುಪತಿ ಬಾಲಾಜಿ ದರ್ಶನದೊಂದಿಗೆ ಚೆನ್ನೈ, ತಿರುಪತಿ, ಕಾಂಚೀಪುರಂ, ಕೋಲ್ಕತ್ತಾ, ಪಾಂಡಿಚೇರಿ ಮತ್ತು ಮಹಾಬಲಿಪುರಂ ನೋಡುವ ಸದಾವಕಾಶ ಒದಗಿಸಿದೆ. 4 ರಾತ್ರಿ, 5 ದಿನಗಳ ಈ ಹೊಸ ವರ್ಷದ ಪಾಂಡಿಚೇರಿ ಪ್ಯಾಕೇಜ್’ ಡಿಸೆಂಬರ್ 29, 2021 ರಿಂದ ಜನವರಿ 2, 2022 ರವರೆಗೆ ಇರುತ್ತದೆ.
IRCTC ಯ ವೆಬ್‌ಸೈಟ್ ಪ್ರಕಾರ, ಕೇವಲ 20 ಪ್ರವಾಸಿಗರು ಈ ಪ್ಯಾಕೇಜ್‌ನ ಭಾಗವಾಗಿರಬಹುದು. ಇದರಿಂದ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ನಿಮಗಿದೆ. ಕೋಲ್ಕತ್ತಾದ ಈಸ್ಟ್ ಝೋನ್ ನಿಂದ ಈ ಪ್ರಯಾಣ ಶುರುವಾಗುವ ಬಗ್ಗೆ ಮಾಹಿತಿ ನೀಡಿರುವ IRCTC, ಪ್ರಯಾಣದ ಖರ್ಚು ಮತ್ತು ಸೌಲಭ್ಯಗಳ ಬಗ್ಗೆ ತಮ್ಮ ವೆಬ್ಸೈಟ್ ನಲ್ಲಿ ಮಾಹಿತಿ ನೀಡಿದೆ.
ತಿರುಪತಿ ಬಾಲಾಜಿ ದರ್ಶನ್ ಪ್ಯಾಕೇಜ್‌ನೊಂದಿಗೆ IRCTC ಯ ಹೊಸ ವರ್ಷದ ಪಾಂಡಿಚೇರಿ ಪ್ಯಾಕೇಜ್ ಕೋಲ್ಕತ್ತಾ-ಚೆನ್ನೈ, ಚೆನ್ನೈ-ಕೋಲ್ಕತ್ತಾಗೆ ವಿಮಾನ ಟಿಕೆಟ್ ಮತ್ತು ಇನ್ನುಳಿದ ಒಡಾಟ ಎಸಿ ವಾಹನದಲ್ಲೆ ನಡೆಯಲಿದ್ದು, ಡಿಲಕ್ಸ್ ವಸತಿಗಳು, ಉಪಹಾರ ಮತ್ತು ರಾತ್ರಿಯ ಊಟ, ತಿರುಪತಿ ಬಾಲಾಜಿಯ ವಿಐಪಿ ದರ್ಶನ ಟಿಕೆಟ್ ಮತ್ತು ಪ್ರಯಾಣ ವಿಮೆ ಸಹ ಒಳಗೊಂಡಿದೆ. ಕೊರೋನಾ ನಿಯಮ ಮೀರದಂತೆ ಟ್ರಿಪ್ ನಿಯೋಜಿಸಿರುವ ಇಲಾಖೆ ಎಲ್ಲಾ ಪ್ರಯಾಣಿಕರು ಕೋವಿಡ್ ನಿಯಮ ಮೀರದಂತೆ ಎಚ್ಚರ ವಹಿಸುತ್ತೇವೆ ಎಂಬ ಭರವಸೆ ನೀಡಿದೆ.