ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ರೈಲ್ವೆ ಟಿಕೆಟ್ ಆನ್ಲೈನ್ ನಲ್ಲಿ ಬುಕ್ ಮಾಡ್ತಿದ್ದ ಪ್ರಯಾಣಿಕರು ಈ ವಿಷ್ಯವನ್ನು ಅವಶ್ಯಕವಾಗಿ ತಿಳಿದುಕೊಳ್ಳಬೇಕಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಟಿಕೆಟ್ ಬುಕ್ಕಿಂಗ್ ಮೊದಲು ಮೊಬೈಲ್ ಮತ್ತು ಇ-ಮೇಲ್ ಪರಿಶೀಲನೆ ಮಾಡಬೇಕಾಗುತ್ತದೆ. ಅದರ ನಂತರವೇ ಟಿಕೆಟ್ ಸಿಗಲಿದೆ.
ಕೊರೊನಾ ಸೋಂಕಿನಿಂದಾಗಿ ದೀರ್ಘಕಾಲದಿಂದ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ರೈಲ್ವೆ, ಹೊಸ ನಿಯಮ ಜಾರಿಗೆ ತಂದಿದೆ. ಐ ಆರ್ ಸಿ ಟಿ ಸಿ ಪೋರ್ಟಲ್‌ನಿಂದ ಟಿಕೆಟ್‌ಗಳನ್ನು ಖರೀದಿಸುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಪರಿಶೀಲಿಸಬೇಕಾಗುತ್ತದೆ. ಅದರ ನಂತರವೇ ಟಿಕೆಟ್ ಸಿಗಲಿದೆ.
ಐಆರ್ ಸಿಟಿಸಿ, ಭಾರತೀಯ ರೈಲ್ವೆ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತದೆ. ಪ್ರಯಾಣಿಕರು ಟಿಕೆಟ್‌ಗಾಗಿ ಈ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕು. ಪಾಸ್ವರ್ಡ್ ರಚಿಸುತ್ತಾರೆ. ತದನಂತರ ಆನ್‌ಲೈನ್ ಬುಕಿಂಗ್‌ನ ಲಾಭ ಪಡೆಯುತ್ತಾರೆ. ಲಾಗಿನ್ ಪಾಸ್ವರ್ಡ್ ರಚಿಸಲು, ಇಮೇಲ್ ಮತ್ತು ಫೋನ್ ಸಂಖ್ಯೆ ಅವಶ್ಯಕ. ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರವೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಕೊರೊನಾ ಕಡಿಮೆಯಾಗ್ತಿದ್ದಂತೆ ರೈಲುಗಳ ಓಡಾಟ ಶುರುವಾಗಿದೆ. ಟಿಕೆಟ್ ಮಾರಾಟವೂ ಹೆಚ್ಚಾಗಿದೆ. ಪ್ರಸ್ತುತ 24 ಗಂಟೆಗಳಲ್ಲಿ ಸುಮಾರು ಎಂಟು ಲಕ್ಷ ರೈಲು ಟಿಕೆಟ್‌ಗಳು ಬುಕ್ ಆಗುತ್ತಿವೆ. ಕೊರೊನಾ ಸೋಂಕಿನ ಮೊದಲ ಮತ್ತು ಎರಡನೇ ಅಲೆ ನಂತ್ರ ಪೋರ್ಟಲ್‌ನಲ್ಲಿ ನಿಷ್ಕ್ರಿಯವಾಗಿದ್ದ ಖಾತೆಗಳನ್ನು ಮತ್ತೆ ಶುರು ಮಾಡಲು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಪರಿಶೀಲನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.