ದೇಶಾದ್ಯಂತ ನವರಾತ್ರಿ ಸಂಭ್ರಮವಿದೆ. ಆಯಾ ಭಾಗಕ್ಕೆ ಪ್ರತ್ಯೇಕ ಆಚರಣೆ ನಡೆಯುತ್ತವೆ. ಈ ಅವಧಿಯಲ್ಲಿ, ಅನೇಕರು ಮಾಂಸಾಹಾರ ಪದಾರ್ಥಗಳನ್ನು ಮತ್ತು ಮದ್ಯಪಾನ ತ್ಯಜಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಸಚಿವಾಲಯವು ವಿಶೇಷ ಮೆನುವನ್ನು ಪರಿಚಯಿಸಿದೆ.
ಟ್ವಿಟರ್ ಪೋಸ್ಟ್‌ನಲ್ಲಿ ಅದು ಹೊಸ ಮೆನುವನ್ನು ಪ್ರಕಟಿಸಿದೆ. ವಿಶೇಷವಾಗಿ ದಿ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನಿಂದ ಒದಗಿಸಲಾದ ಮೆನುವು ವಿವಿಧ ತಿನಿಸು ಒಳಗೊಂಡಿದೆ. “ನವರಾತ್ರಿಯ ಮಂಗಳಕರ ಹಬ್ಬದ ಸಮಯದಲ್ಲಿ, ನಿಮ್ಮ ವ್ರತದ ಬಯಕೆ ಪೂರೈಸಲು ಭಾರತೀಯ ರೈಲ್ವೆ ನಿಮಗೆ ವಿಶೇಷ ಮೆನುವನ್ನು ತರುತ್ತದೆ, ಇದನ್ನು 26.09.22 – 05.10.22 ರವರೆಗೆ ನೀಡಲಾಗುತ್ತದೆ” ಎಂದು ತಿಳಿಸಿದೆ.
ಈ ಪೋಸ್ಟ್ 3 ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದೆ ಮತ್ತು ನೂರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಭಾರತೀಯ ರೈಲ್ವೆ ತೆಗೆದುಕೊಂಡ ನಿರ್ಧಾರವನ್ನು ಜನರು ಶ್ಲಾಘಿಸಿದ್ದಾರೆ.