ನವದೆಹಲಿ: ಭಾರತೀಯ ರೈಲ್ವೇ 500 ಮೇಲ್ ಎಕ್ಸ್ ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ವರ್ಗಕ್ಕೆ ಪರಿವರ್ತಿಸಿದೆ. ಇದರ ಜೊತೆಗೆ 130 ಸರ್ವೀಸ್ ಗಳನ್ನು(65 ಜೋಡಿ) ಸೂಪರ್ ಫಾಸ್ಟ್ ವರ್ಗಕ್ಕೆ ಪರಿವರ್ತಿಸುವ ಮೂಲಕ ವೇಗಗೊಳಿಸಲಾಗಿದೆ. ರೈಲುಗಳ ವೇಗವು 10 ನಿಮಿಷದಿಂದ 70 ನಿಮಿಷಗಳವರೆಗೆ ಇರುತ್ತದೆ.
ರೈಲ್ವೇ ಸಚಿವಾಲಯವು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ “ಟ್ರೇನ್ಸ್ ಅಟ್ ಎ ಗ್ಲಾನ್ಸ್” ಎಂದು ಕರೆಯಲ್ಪಡುವ ತನ್ನ ಹೊಸ ಅಖಿಲ ಭಾರತ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದೆ.ಹೊಸ ವೇಳಾಪಟ್ಟಿ ಶನಿವಾರ ಜಾರಿಗೆ ಬಂದಿದೆ.
2022-23ರ ಅವಧಿಯಲ್ಲಿ ಮೇಲ್ ಎಕ್ಸ್ ಪ್ರೆಸ್ ರೈಲುಗಳ ಸಮಯಪ್ರಜ್ಞೆಯು(punctuality) ಸುಮಾರು 84 ಪ್ರತಿಶತದಷ್ಟಿದೆ, ಇದು 2019-20ರಲ್ಲಿ ಸಾಧಿಸಿದ ಸಮಯಪ್ರಜ್ಞೆಗಿಂತ 9 ಪ್ರತಿಶತ ಹೆಚ್ಚು ಎಂದು ಸಚಿವಾಲಯ ಹೇಳಿದೆ.