ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗಿದ್ದ ಸಂದರ್ಭದಲ್ಲಿ ರೈಲ್ವೇ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ಭಾರತೀಯ ರೈಲ್ವೆ ಈಗ ಕೌಂಟರ್ ನಲ್ಲೇ ಟಿಕೆಟ್ ಖರೀದಿಸಲು ಅವಕಾಶ ನೀಡಲಿದೆ.
ಸೀಟು ಕಾಯ್ದಿರಿಸದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೋಚ್ ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಕೌಂಟರ್ ನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸಲು ಅವಕಾಶ ಸಿಗಲಿದೆ. ಭಾರತೀಯ ರೈಲ್ವೆ ಮಂಡಳಿ ಅಧಿಕಾರಿಗಳು ಕೋಚ್ ಮರು ಸೇರ್ಪಡೆಗೆ ರೈಲ್ವೆ ವಲಯ ಗಳಿಗೆ ಅನುಮತಿ ನೀಡಿದ್ದು, ನೈರುತ್ಯ ರೈಲ್ವೆ, ದಕ್ಷಿಣ ರೈಲ್ವೆ ವಲಯಗಳ ಕೆಲವು ರೈಲುಗಳಲ್ಲಿ ಸೆಕೆಂಡ್ ಕ್ಲಾಸ್ ಸೀಟಿನ ಕೋಚ್ ಗಳನ್ನು ಡಿ ರಿಸರ್ವ್ ಮಾಡಲಾಗಿದೆ.
ಕಾಯ್ದಿರಿಸದ ಕೋಚ್ ಗಳ ಮರು ಸೇರ್ಪಡೆ ಮಾಡಲಾಗಿದ್ದು, ಇದರೊಂದಿಗೆ ಸೀಟು ಕಾಯ್ದಿರಿಸದ ಪ್ರಯಾಣಿಕರ ಅನುಕೂಲಕ್ಕಾಗಿ ಕೌಂಟರ್ ಗಳಲ್ಲಿ ಟಿಕೆಟ್ ಖರೀದಿಸಲು ಅವಕಾಶ ನೀಡಲಾಗುವುದು. ಹಿಂದೆ ಕೊರೋನಾ ಕಾರಣದಿಂದ ಪ್ರಯಾಣಿಕರು ಸೀಟುಗಳನ್ನು ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈಗ ಕಾಯ್ದಿರಿಸದ ಕೋಚ್ ಗಳನ್ನು ಪುನಾರಂಭಿಸಲಾಗುವುದು ಎಂದು ಹೇಳಲಾಗಿದೆ.