ಭಾರತೀಯ ರೈಲ್ವೆಯು ಪಾಟ್ನಾದ ದಾನಾಪುರದಿಂದ ತಿರುಪತಿಗೆ ಬೇಸಿಗೆ ವಿಶೇಷ ರೈಲು ಸೇವೆ ಘೋಷಿಸಿದೆ. ಎರಡು ನಗರಗಳ ನಡುವೆ ಬೇಸಿಗೆ ವಿಶೇಷ ರೈಲು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ.
ರೈಲು ಸಂಖ್ಯೆ 07420, ದಾನಾಪುರ-ತಿರುಪತಿ ವಿಶೇಷ ರೈಲು ಏಪ್ರಿಲ್ 24, ಮೇ 1 ಮತ್ತು ಮೇ 8 ರಂದು ದಾನಪುರದಿಂದ ತಿರುಪತಿಗೆ ಚಲಿಸಲಿದೆ. ರೈಲು ಮಂಗಳವಾರ ಮಧ್ಯಾಹ್ನ 2:00 ಗಂಟೆಗೆ ದಾನಪುರದಿಂದ ಹೊರಟು ಬುಧವಾರ ಬೆಳಗ್ಗೆ 7:45 ಕ್ಕೆ ತಿರುಪತಿಗೆ ಆಗಮಿಸಲಿದೆ.
ರೈಲು ಆರಾ, ಬಕ್ಸರ್, ಪಂ. ದೀನದಯಾಳ್ ಉಪಾಧ್ಯಾಯ ಜಂಕ್ಷನ್, ಪ್ರಯಾಗ್ರಾಜ್ ಛೋಕಿ ಮತ್ತು ಜಬಲ್ಪುರ್ ಮೂಲಕ ತಿರುಪತಿ ತಲುಪಲಿದೆ. ಈ ವಿಶೇಷ ರೈಲು ಮೂರು ಸೆಕೆಂಡ್ ಎಸಿ ಕ್ಲಾಸ್, ಐದು ಥರ್ಡ್ ಎಸಿ ಕ್ಲಾಸ್, 11 ಸ್ಲೀಪರ್ ಕ್ಲಾಸ್ ಮತ್ತು ಎರಡು ಸಾಮಾನ್ಯ ದರ್ಜೆಯ ಕೋಚ್ಗಳನ್ನು ಹೊಂದಿರುತ್ತದೆ.
ರೈಲು ಸಂಖ್ಯೆ 07419, ತಿರುಪತಿ-ದಾನಾಪುರ ವಿಶೇಷ ರೈಲು ಏಪ್ರಿಲ್ 29 ಮತ್ತು ಮೇ 6 ರಂದು ಕಾರ್ಯನಿರ್ವಹಿಸಲಿದೆ. ವಿಶೇಷ ರೈಲು ಈ ಎರಡು ದಿನಗಳಲ್ಲಿ ಮಾತ್ರ ತಿರುಪತಿಯಿಂದ ದಾನಪುರಕ್ಕೆ ಹೊರಡಲಿದೆ. ಶನಿವಾರ ಬೆಳಗ್ಗೆ 7:15ಕ್ಕೆ ತಿರುಪತಿ ನಿಲ್ದಾಣದಿಂದ ಹೊರಡುವ ರೈಲು ಭಾನುವಾರ ರಾತ್ರಿ 11:15ಕ್ಕೆ ದಾನಪುರ ತಲುಪಲಿದೆ.
ಬೇಸಿಗೆ ರಜೆಗಳು ಸಮೀಪಿಸುತ್ತಿರುವ ಕಾರಣ ಪ್ರವಾಸಕ್ಕೆ ತೆರಳುವ ಕುಟುಂಬಗಳ ಅನುಕೂಲಕ್ಕಾಗಿ ಹಲವು ಬೇಸಿಗೆ ವಿಶೇಷ ರೈಲುಗಳನ್ನು ಸಹ ರೈಲ್ವೆ ಇಲಾಖೆ ಘೋಷಿಸಿದೆ.