ಕರಾಚಿ: ಭಾರತೀಯ ವಾಣಿಜ್ಯ ವಿಮಾನವೊಂದು ಸೋಮವಾರ ಕರಾಚಿಯ ಜಿನ್ನಾ ಟರ್ಮಿನಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನವು ನವದೆಹಲಿಯಿಂದ ದೋಹಾಗೆ ತೆರಳುತ್ತಿದ್ದಾಗ ವಿಮಾನದಲ್ಲಿ ವೈದ್ಯಕೀಯ ತುರ್ತುಸ್ಥಿತಿ ವರದಿಯಾಗಿದೆ.
ಇಂಡಿಗೋ ಏರ್ಲೈನ್ ವಿಮಾನದ ಪ್ರಯಾಣಿಕನೊಬ್ಬ ಮಾರ್ಗಮಧ್ಯೆ ಅಸ್ವಸ್ಥರಾಗಿದ್ದಾರೆ. ಪ್ರಯಾಣಿಕನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ, ಕ್ಯಾಪ್ಟನ್ ಕರಾಚಿ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕಿಸಿ ಮಾನವೀಯ ಆಧಾರದ ಮೇಲೆ ಕರಾಚಿಯಲ್ಲಿ ಇಳಿಯಲು ಅನುಮತಿ ಕೋರಿದರು. ಹೀಗಾಗಿ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.