ಸಾರ್ಕ್ ದೇಶಗಳ ಪ್ರಜೆಗಳಿಗೆ ತನ್ನ ನೆಲೆಗೆ ಪ್ರವಾಸಿ ವೀಸಾ ಮೇಲೆ ಆಗಮಿಸಲು ಯುಎಇ ಅನುಮತಿ ನೀಡಿದೆ. ಭಾರತ ಸೇರಿದಂತೆ ಈ ದೇಶಗಳ ಪಾಸ್‌ಪೋರ್ಟ್‌ದಾರರು ದಕ್ಷಿಣ ಏಷ್ಯಾದ ಈ ಎಂಟು ದೇಶಗಳಲ್ಲಿ ಕಳೆದ 14 ದಿನಗಳನ್ನು ಕಳೆದಿರಬಾರದು ಎಂಬ ಷರತ್ತನ್ನು ಇದೇ ವೇಳೆ ವಿಧಿಸಲಾಗಿದೆ.
ಈ ಮೂಲಕ ಕೋವಿಡ್-19 ಸೋಂಕಿನ ಕಾರಣದಿಂದಾಗಿ ದಕ್ಷಿಣ ಏಷ್ಯಾದ ಒಕ್ಕೂಟದ ದೇಶಗಳಿಗೆ ಸೇರಿದ ಪ್ರಜೆಗಳಿಗೆ ತನ್ನ ಪ್ರದೇಶದ ಮೂಲಕ ಹಾದು ಹೋಗಲು ಮಾತ್ರವೇ ಅನುಮತಿ ಕೊಟ್ಟಿದ್ದ ಯುಎಇ ಈಗ ತನ್ನ ನಿಲುವಿನಲ್ಲಿ ಬದಲಾವಣೆ ತಂದುಕೊಂಡಿದೆ.
ಬಣ್ಣ ಬದಲಾಯಿಸಿದ ಆಕ್ಟೋಪಸ್ ವಿಡಿಯೋ ವೈರಲ್
ಇದಕ್ಕೂ ಮುನ್ನ ಎಲ್ಲ ಪ್ರವಾಸಿಗರೂ ಸಹ ಯುಎಇ ನೆಲದಲ್ಲಿ ಕಾಲಿಟ್ಟ ಮೊದಲ ದಿನವೇ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆ ಮಾಡಿಸಿಕೊಂಡು, ಒಂಬತ್ತನೇ ದಿನವೂ ಇದೇ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿಸಿಕೊಳ್ಳಬೇಕಾಗುತ್ತದೆ.
ಕೋವಿಡ್ ಸೋಂಕಿನಿಂದಾಗಿ ಯುಎಇನಲ್ಲಿ 7,08,302 ಮಂದಿ ಸೋಂಕಿತರಾಗಿದ್ದು, 2,018 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳದೇ ಇರುವ ಮಂದಿಯನ್ನು ತನ್ನಲ್ಲಿಗೆ ಕರೆದುಕೊಂಡು ಬಂದ ಕಾರಣ ಇಂಡಿಗೋ ಏರ್ ವಿಮಾನಗಳ ಮೇಲೆ ಆಗಸ್ಟ್ 24ರ ವರೆಗೆ ಯುಎಇ ನಿಷೇಧಿಸಿತ್ತು.