ಸಿಡ್ನಿ: ಭಾರತೀಯ ಮೂಲದ ಬಾಣಸಿಗ ಜಸ್ಟೀನ್ ನಾರಾಯಣ್ ಅವರು ಮಾಸ್ಟರ್ ಚೆಫ್ ಆಸ್ಟ್ರೇಲಿಯಾ 2021ರ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆದ 13ನೇ ಸೀಸನ್ ನ ಅಂತಿಮ ಹಣಾಹಣಿಯಲ್ಲಿ ಜಸ್ಟೀನ್ ನಾರಾಯಣ್ ಅವರು ಗೆಲುವಿನ ಕಿರೀಟ ತೊಟ್ಟಿದ್ದಾರೆ. ಕಿಶ್ವರ್ ಹಾಗೂ ಪೀಟ್ ವಿರುದ್ಧದ ಪೈಪೋಟಿಯಲ್ಲಿ ನಾರಾಯಣ್ ಗೆಲುವು ಸಾಧಿಸಿದರು. ಬಹುಮಾನದ ಮೊತ್ತವಾಗಿ ಒಂದು ಕೋಟಿ ಎಂಬತ್ತಾರು ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ.
ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ
ಬಾಣಸಿಗ ಜಸ್ಟೀನ್ ನಾರಾಯಣ್, ವಿಭಿನ್ನವಾದ ಖಾದ್ಯ ತಯಾರಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದರು. ಬಾಣಸಿಗ ಪೀಟರ್ ಗಿಲ್ಮೋರ್ ಅವರು ಜಸ್ಟೀನ್ ನಾರಾಯಣ್ ವಿಜೇತರೆಂದು ಘೋಷಿಸಿದ್ದಾರೆ. ಇವರು ತಯಾರಿಸಿದ ಖಾರದ ಖಾದ್ಯಕ್ಕಾಗಿ 40 ಹಾಗೂ ಸಿಹಿ ಖಾದ್ಯಕ್ಕಾಗಿ 36 ಅಂಕಗಳನ್ನು ಗಳಿಸಿದ್ದರು. ಪ್ರಶಸ್ತಿ ಪಡೆದಿರುವುದಕ್ಕೆ ನಾರಾಯಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಪರ್ಧೆಯ ಮೊದಲ ರನ್ನರ್ ಅಪ್ ಪೀಟ್ ಗೆ 22 ಲಕ್ಷ ಹಾಗೂ 2ನೇ ರನ್ನರ್ ಅಪ್ ಕಿಶ್ವಾರ್ 14 ಲಕ್ಷ ಹಣವನ್ನು ಬಹುಮಾನ ರೂಪದಲ್ಲಿ ಪಡೆದಿದ್ದಾರೆ.
https://www.instagram.com/p/CRRC8HHrjgh/?utm_source=ig_web_copy_link
https://www.instagram.com/p/CRRDTNpJRyh/?utm_source=ig_web_copy_link