ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಹೋರಾಡಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ದೀರ್ಘಾವಧಿಯ ವಿಮಾನದಲ್ಲಿ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ. ವಿಶ್ವರಾಜ್ ವೇಮಲಾ ಅವರು 10 ಗಂಟೆ ಕಾಲ ವಿಮಾನ ಪ್ರಯಾಣದಲ್ಲಿದ್ದಾಗ 43 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದುಬಿದ್ದರು.
ವಿಮಾನದಲ್ಲಿದ್ದ ವೈದ್ಯಕೀಯ ಸಾಮಗ್ರಿಗಳು ಮತ್ತು ಪ್ರಯಾಣಿಕರ ವಸ್ತುಗಳ ನೆರವಿನಿಂದ, ಡಾ ವೇಮಲಾ ತನ್ನ ಸಹ ಪ್ರಯಾಣಿಕರನ್ನ ಎರಡು ಬಾರಿ ಹೃದಯಸ್ತಂಭನದಿಂದ ಕಾಪಾಡಿದ್ದಾರೆ.
“ನಮ್ಮ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಗಳಲ್ಲಿ ಒಬ್ಬರಾದ ಡಾ. ವಿಶ್ವರಾಜ್ ವೇಮಲಾ ಅವರು ವಿಮಾನದ ಮಧ್ಯದಲ್ಲಿ ಎರಡು ಬಾರಿ ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು. ಸೀಮಿತ ಪರಿಕರಗಳೊಂದಿಗೆ, ಡಾ ವೇಮಲಾ ಅವರು ರೋಗಿಯನ್ನು ತುರ್ತು ಸಿಬ್ಬಂದಿಗೆ ಹಸ್ತಾಂತರಿಸುವ ಮೊದಲು ನೆಲದ ಮೇಲೆ ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಯಿತು,” ಎಂದು ಯೂನಿವರ್ಸಿಟಿ ಆಸ್ಪತ್ರೆ ಬರ್ಮಿಂಗ್ಹ್ಯಾಮ್ ಟ್ವಿಟರ್ ನಲ್ಲಿ ತಿಳಿಸಿದೆ.