ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ‘ಪಾರ್ಟಿಗೇಟ್’ ತೊಂದರೆ ಹೆಚ್ಚಾಗುತ್ತಿದ್ದಂತೆ ಅವರದೇ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಬ್ರಿಟಿಷ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಸ್ಥಾನಕ್ಕೆ ಭಾರತೀಯ ಮೂಲದ ಚಾನ್ಸೆಲರ್ ರಿಷಿ ಸುನಕ್ ಅವರ ಹೆಸರು ಮುಂಚೂಣಿಯಲ್ಲಿದೆ.
pharmacist ತಾಯಿ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆ(NHS) ಜನರಲ್ ಪ್ರಾಕ್ಟೀಷನರ್(GP) ತಂದೆಯ UK-ಸಂಜಾತ ಮಗ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ಪದವೀಧರರಾಗಿರುವ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಾದ ಕೃಷ್ಣ ಮತ್ತು ಅನೌಷ್ಕಾ ಇದ್ದಾರೆ.
ಯಾರ್ಕ್ ಷೈರ್‌ನಲ್ಲಿರುವ ರಿಚ್ ಮಂಡ್ ನ ಸಂಸದರು ಮೊದಲು 2015 ರಲ್ಲಿ ಯುಕೆ ಪಾರ್ಲಿಮೆಂಟ್‌ಗೆ ಪ್ರವೇಶಿಸಿದ್ದರು. ಯುರೋಪಿಯನ್ ಯೂನಿಯನ್(ಇಯು) ತೊರೆಯುವ ಜಾನ್ಸನ್ ಕಾರ್ಯತಂತ್ರ ಬೆಂಬಲಿಸಿದ ದೃಢವಾದ ಬ್ರೆಕ್ಸಿಟೈರ್ ಆಗಿ ಗಮನಸೆಳೆದಿದ್ದರು.