
“ಆಗಸ್ಟ್ 5ರಂದು ನಾನು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಮೌಂಟ್ ಕಿಲಿಮಾಂಜರೋವನ್ನು ಬೈಸಿಕಲ್‌ನಲ್ಲಿ ಏರಿದ್ದೆ. ಅದಾಗಲೇ ಟಾಪ್‌ನಲ್ಲಿರುವ ವ್ಯಕ್ತಿ, ಏಕೈಕ ರಿಯಲ್ ಹೀರೋ ಸೋನು ಸೂದ್ ಸರ್‌ಗೆ ಈ ವಿಜಯವನ್ನು ಅರ್ಪಿಸುತ್ತಿದ್ದೇನೆ. ಯಾವಾಗಲೂ ಸ್ಪೂರ್ತಿಯಾಗಿರುವ ಸೋನು ಸರ್‌ಗೆ ಧನ್ಯವಾದ” ಎಂದು ಉಮಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೋನು ಸೂದ್, “ವಾವ್. ನಾನು ಸಹ ಮೌಂಟ್ ಕಿಲಿಮಾಂಜರೋ ಏರಿದ್ದೆ ಎಂದು ಹೇಳಬಹುದು. ಬಹಳ ಹೆಮ್ಮೆಯಾಗುತ್ತಿದೆ ಉಮಾ” ಎಂದು ಹೇಳಿದ್ದಾರೆ.