ಹತಾಶೆಯ ಸಮಯದಲ್ಲಿ ಭರವಸೆ ಮೂಡಿಸುವಂತವರು ಬಂದ್ರೆ ಬಾಳು ಹಸನಾಗುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯ ನಡುವೆ, ರೌನಕ್ ರಾವಲ್ ಎಂದು ಗುರುತಿಸಲಾದ ಭಾರತೀಯ ವ್ಯಕ್ತಿಯೊಬ್ಬರು ಉಕ್ರೇನ್‌ಗೆ ಪ್ರವೇಶಿಸುವ ಮುಖಾಂತರ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ರೌನಕ್ ಅವರ ಕಥೆ ಹೃದಯಸ್ಪರ್ಶಿ ಮಾತ್ರವಲ್ಲದೆ ಸ್ಪೂರ್ತಿದಾಯಕವೂ ಆಗಿದೆ.
ಯುದ್ಧದ ಬಿಕ್ಕಟ್ಟಿನ ಸಮಯದಲ್ಲಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಬಹಳಷ್ಟು ವಿದ್ಯಾರ್ಥಿಗಳಿಗೆ ರೌನಕ್ ಸಹಾಯಹಸ್ತ ಚಾಚಿದ್ದಾರೆ. ಡೆನ್ಮಾರ್ಕ್‌ನಲ್ಲಿ ವಾಸಿಸುವ ರೌನಕ್ ರಾವಲ್, ಇಂತಹ ಕಠಿಣ ಸಮಯದಲ್ಲಿ ಅನೇಕರಿಗೆ ರಕ್ಷಕನಾಗಿ ಧಾವಿಸಿದ್ದಾರೆ. ಯುದ್ಧಪೀಡಿತ ದೇಶದಲ್ಲಿ ಸಿಲುಕಿ ಒದ್ದಾಡುತ್ತಿರುವ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಮಗು ತನ್ನ ತಾಯಿಯೊಂದಿಗೆ ಉಕ್ರೇನಿಯನ್ ಗಡಿಯಲ್ಲಿ ಸಿಲುಕಿಕೊಂಡಿದೆ ಎಂದು ರೌನಕ್ ವಿಡಿಯೋದಲ್ಲಿ ಹೇಳಿದ್ದಾರೆ. ನಂತರ ಅವರು ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಕರೆದೊಯ್ಯಲು ಅಲ್ಲಿಗೆ ತಲುಪಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶಿಸಿ 11 ದಿನಗಳು ಕಳೆದಿವೆ. ಆದರೆ, ಪುಟಿನ್ ಉಕ್ರೇನಿಯನ್ ನಗರಗಳಲ್ಲಿ ರಷ್ಯಾ ಬಾಂಬ್ ದಾಳಿಯ ಬಗೆಗಿನ ವರದಿಗಳನ್ನು ನಿರಾಕರಿಸಿದ್ದಾರೆ.