
ಭಾರತೀಯ ಮೂಲದ ಯುವತಿಯನ್ನು ಆಫ್ರಿಕನ್ ಮಹಿಳೆಯರು ಮನಬಂದಂತೆ ಥಳಿಸಿರುವ ಶಾಕಿಂಗ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ನೆದರ್ಲ್ಯಾಂಡ್ಸ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಆರಂಭದಲ್ಲಿ ಭಾರತೀಯ ಮೂಲದ ಈ ಯುವತಿ ಜೊತೆ ಆಫ್ರಿಕನ್ ಮಹಿಳೆಯೊಬ್ಬಳು ಮಾತಿನ ಚಕಮಕಿ ನಡೆಸುತ್ತಿರುತ್ತಾಳೆ. ಭಾರತೀಯ ಯುವತಿ ಏನೇ ಸಮಜಾಯಿಷಿ ನೀಡಿದರೂ ಸಹ ಕಿವಿಗೊಡದ ಆಕೆ ಕೆನ್ನೆಗೆ ಹೊಡೆಯಲು ಮುಂದಾಗಿದ್ದಾಳೆ.
ಸ್ವಲ್ಪ ಹೊತ್ತಿನಲ್ಲೇ ಇವರಿಬ್ಬರ ವಾಗ್ವಾದ ತಾರಕಕ್ಕೇರಿದ್ದು, ಆಫ್ರಿಕನ್ ಮಹಿಳೆ, ಭಾರತೀಯ ಯುವತಿಯ ಕೂದಲು ಹಿಡಿದು ಹೊಡೆಯಲು ಆರಂಭಿಸುತ್ತಾಳೆ. ಅಷ್ಟರಲ್ಲೇ ಆಕೆಗೆ ಮತ್ತಷ್ಟು ಮಹಿಳೆಯರು ಜೊತೆಯಾಗಿದ್ದು, ಭಾರತೀಯ ಯುವತಿ ಕೆಳಗೆ ಬಿದ್ದರೂ ಸಹ ಅಮಾನವೀಯವಾಗಿ ಥಳಿಸಿದ್ದಾರೆ.
ಆಘಾತಕಾರಿ ಸಂಗತಿ ಎಂದರೆ ಅಲ್ಲಿದ್ದ ಇತರೆಯವರು ಇವರಿಬ್ಬರ ಜಗಳ ಬಿಡಿಸಲು ಮುಂದಾಗದೆ ತಮ್ಮ ತಮ್ಮ ಮೊಬೈಲ್ ಫೋನ್ ಗಳಲ್ಲಿ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.