ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಆರೋಗ್ಯಕ್ಕೆ ಹಾನಿಮಾಡುವಂತಹ ಫುಡ್ ಗಳಿಗೆ ನಿಷೇಧ ಹೇರಲಾಗುತ್ತದೆ. ಭಾರತದಲ್ಲಿ ಜನರು ಚಪ್ಪರಿಸಿಕೊಂಡು ತಿನ್ನುವ ಅನೇಕ ಫುಡ್ ಗಳು ಇತರ ದೇಶಗಳಲ್ಲಿ ಬ್ಯಾನ್ ಆಗಿವೆ. ಆ ದೇಶಗಳಲ್ಲಿ ಈ ಫುಡ್ ಗಳ ಮಾರಾಟ ನಿಷೇಧವಾಗಿದೆ.
ಸಮೋಸಾ : ಸಮೋಸಾದಲ್ಲಿ ಪನೀರ್ ಸಮೋಸ, ಆಲೂ ಸಮೋಸ, ಮಿಕ್ಸ್ ವೆಜ್ ಸಮೋಸ ಮುಂತಾದ ಅನೇಕ ಸಮೋಸಾಗಳನ್ನು ಭಾರತದಲ್ಲಿ ಬಹಳ ಫೇಮಸ್ . ಭಾರತದಲ್ಲಿ ಜನರು ಇಷ್ಟಪಟ್ಟು ತಿನ್ನುವ ಈ ಸಮೋಸಾವನ್ನು ಸೋಮಾಲಿಯಾದಲ್ಲಿ ನಿಷೇಧಿಸಲಾಗಿದೆ.
ತುಪ್ಪ : ಭಾರತದಲ್ಲಿ ಸಿಹಿ ತಿಂಡಿಗಳ ತಯಾರಿಕೆಗೆ ಹಾಗೂ ಅನೇಕ ರೀತಿಯ ಅಡುಗೆಗೆ ತುಪ್ಪವನ್ನು ಬಳಸಲಾಗುತ್ತದೆ. ತುಪ್ಪ ಹೆಚ್ಚಿನ ರುಚಿ, ಪರಿಮಳ ಮತ್ತು ಆರೋಗ್ಯವನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಭಾರತದಲ್ಲಿ ನಿಯಮಿತವಾಗಿ ಅಡುಗೆಗಳಲ್ಲಿ ಬಳಸಲಾಗುವ ತುಪ್ಪವನ್ನು ಅಮೆರಿಕದಲ್ಲಿ ಬ್ಯಾನ್ ಮಾಡಿದ್ದಾರೆ. ತುಪ್ಪ ಹೃದಯಾಘಾತ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ತುಪ್ಪದ ಸೇವನೆಯನ್ನು ನಿಷೇಧಿಸಲಾಗಿದೆ.
ಚವನಪ್ರಾಶ : ಭಾರತದಲ್ಲಿ ಚವನಪ್ರಾಶವನ್ನು ಬಹಳ ಮಂದಿ ಸೇವಿಸುತ್ತಾರೆ. ಆದರೆ ಕೆನಡಾದಲ್ಲಿ 2005ರಿಂದಲೇ ಚವನಪ್ರಾಶವನ್ನು ಬ್ಯಾನ್ ಮಾಡಿದ್ದಾರೆ. ಚವನಪ್ರಾಶದಲ್ಲಿ ಹೆಚ್ಚಿನ ಸೀಸ ಮತ್ತು ಪಾದರಸದ ಅಂಶವಿದೆಯೆಂದು ಕೆನಡಾ ಇದನ್ನು ನಿಷೇಧಿಸಿದೆ.
ಕಬಾಬ್ : ಭಾರತದ ಮಾಂಸಪ್ರಿಯರ ಪ್ರಮುಖ ಆಹಾರವಾಗಿರುವ ಕಬಾಬ್ ವೆನಿಸ್ ನಲ್ಲಿ ಬ್ಯಾನ್ ಆಗಿದೆ.
ಗಸಗಸೆ ಬೀಜ : ಗಸಗಸೆ ಬೀಜವನ್ನು ಭಾರತದಲ್ಲಿ ಅನೇಕ ರೀತಿಯ ಅಡುಗೆಗಳಲ್ಲಿ ಬಳಕೆ ಮಾಡುತ್ತಾರೆ. ಗಸಗಸೆ ಬೀಜವನ್ನು ಸಿಂಗಾಪುರ ಮತ್ತು ಥೈವಾನ್ ನಲ್ಲಿ ನಿಷೇಧಿಸಿದ್ದಾರೆ.
ಕೆಚಪ್ : ಸಮೋಸಾ, ಫಿಂಗರ್ ಚಿಪ್ಸ್, ಬೋಂಡಾ ಇವುಗಳ ಜೊತೆ ಟೊಮೆಟೋ ಸಾಸ್ ಬೇಕೇ ಬೇಕು. ಆದ್ರೆ ಫ್ರಾನ್ಸ್ ನಲ್ಲಿ ಕೆಚಪ್ ಬಳಸೋದಿಲ್ಲ.
ಜೆಲ್ಲಿ ಕಪ್ಸ್ : ಮಕ್ಕಳನ್ನು ಬಹಳ ಆಕರ್ಷಿಸುವ ಜೆಲ್ಲಿ ಕಪ್ ಆಸ್ಟ್ರೇಲಿಯಾದಲ್ಲಿ ಬ್ಯಾನ್ ಆಗಿದೆ.