ನವದೆಹಲಿ: ಭಾರತೀಯ ರಾಯಭಾರ ಕಚೇರಿಯು ರಷ್ಯಾದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ನೀಡಿದ್ದು, ‘ದೇಶವನ್ನು ತೊರೆಯಲು ಯಾವುದೇ ಭದ್ರತಾ ಕಾರಣಗಳಿಲ್ಲ’ ಎಂದು ಭರವಸೆ ನೀಡಿದೆ.
ಹೆಚ್ಚಿನ ವಿಶ್ವವಿದ್ಯಾನಿಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ ಎಂದು ರಾಯಭಾರ ಕಚೇರಿಯು ದೃಢಪಡಿಸಿದೆ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲ್ಲ. ಅವರು ತಮ್ಮ ಶಿಕ್ಷಣವನ್ನು ಕಳೆದುಕೊಳ್ಳುವುದಿಲ್ಲ. ಆದಾಗ್ಯೂ ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾಲಯಗಳೊಂದಿಗೆ ಇದರ ಬಗ್ಗೆ ದೃಢೀಕರಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಹೀಗಿದ್ದರೂ, ರಷ್ಯಾದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಅಡೆತಡೆಗಳಿಂದ ವ್ಯತ್ಯಯ ಉಂಟಾಗಿರುವುದರಿಂದ ತೊಂದರೆಯಾದಂತಹ ವಿದ್ಯಾರ್ಥಿಗಳು ದೇಶವನ್ನು ತೊರೆಯಬಹುದು ಎಂದು ರಾಯಭಾರ ಕಚೇರಿ ಹೇಳಿದೆ.