
ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ಮ್ಯೂಸಿಯಂಗೆ ಭೇಟಿ ನೀಡಿ ಅಪರೂಪದ ವಸ್ತುಗಳು ಹಾಗೂ ಫೋಟೋಗಳನ್ನು ವೀಕ್ಷಿಸಿ ಅವುಗಳ ಮಾಹಿತಿ ಪಡೆದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ಸಹ ಈ ಮ್ಯೂಸಿಯಂ ಗೆ ಭೇಟಿ ನೀಡಿದ್ದು, ಸ್ವಾತಂತ್ರ್ಯ ನಂತರ ಭಾರತ ನಡೆದು ಬಂದ ಹಾದಿ ಹಾಗೂ ಈವರೆಗಿನ ಎಲ್ಲ ಪ್ರಧಾನಿಗಳ ಕುರಿತ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ನರೇಂದ್ರ ಮೋದಿಯವರು ಈ ಮ್ಯೂಸಿಯಂ ಉದ್ಘಾಟಿಸಿದ್ದರು.