ಅರುಣಾಚಲ ಪ್ರದೇಶದ ಎಲ್‌ಎಸಿಯಲ್ಲಿ ಭಾರತೀಯ ಸೇನೆ, ಚೀನಾದ ಪಿಎಲ್‌ಎ ಚಕಮಕಿಯಲ್ಲಿ ಭಾಗಿಯಾಗಿವೆ. ಡಿಸೆಂಬರ್ 9 ರಂದು ಭಾರತದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ.
ಶುಕ್ರವಾರ ನಡೆದ ಮುಖಾಮುಖಿಯಲ್ಲಿ ಎರಡೂ ಕಡೆಯ ಸುಮಾರು 30 ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(ಎಲ್‌ಎಸಿ) ಉದ್ದಕ್ಕೂ ಘರ್ಷಣೆ ನಡೆಸಿದರು. ಈ ಘರ್ಷಣೆಯಲ್ಲಿ ಕೆಲವು ಭಾರತೀಯ ಸೈನಿಕರು ಗಾಯಗೊಂಡರು. ಮುಖಾಮುಖಿಯಲ್ಲಿ ಎರಡು ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಿಗೆ ಕಾರಣವಾಯಿತು. ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ನಿರ್ಗಮಿಸಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಪಡೆಗಳು ಚೀನಾ ಸೈನಿಕರನ್ನು ತಡೆದಿದ್ದವು. ಸುಮಾರು 200 ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಸೈನಿಕರನ್ನು ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತಡೆಹಿಡಿಯಲಾಗಿತ್ತು.