alex Certify ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ದಿನವಾಗಿದೆ. ಈ ದಿನದಂದು ವಧು – ವರರು ಅತ್ಯಂತ ಸುಂದರವಾಗಿ ಕಾಣುವಂತೆ ತಯಾರಾಗ್ತಾರೆ ಅನ್ನೋದು ಸಹ ಎಲ್ಲರಿಗೂ ತಿಳಿದಿರುವ ವಿಚಾರವೇ.

ಮದುವೆ ದಿನದಂದು ವಧುವಿಗೆ ಅಲಂಕಾರ ಮಾಡಿದ ವಿಡಿಯೋವೊಂದು ಇನ್​ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ವಧು ಅಕ್ಷಯಾ ಎಂಬಾಕೆ ವರ ಅಭಿಷೇಕ್​ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವಣಗಿತ್ತಿಯಾಗಿ ತಯಾರಾದ ಅಕ್ಷಯಾ ಸೀರೆಯಲ್ಲಿ ಅತ್ಯಂತ ಸುಂದರವಾಗಿ ಕಾಣ್ತಿದ್ದಾರೆ.

ಆದರೆ ಇವರ ಸಂಪೂರ್ಣ ಅಲಂಕಾರದಲ್ಲಿ ವಿಶೇಷವಾಗಿ ಕಂಡಿದ್ದು ಅಕ್ಷಯಾ ಧರಿಸಿದ ಕಿರೀಟ..!. ಯಸ್, ಈ ಕಿರೀಟಗಳನ್ನ ಪಾನಿಪುರಿಯಲ್ಲಿ ಬಳಸುವ ಪುರಿಯನ್ನ ಬಳಸಿ ತಯಾರಿಸಲಾಗಿತ್ತು. ಅಕ್ಷಯಾ ಕುಟುಂಬಸ್ಥರು ಪುರಿಯ ಕಿರೀಟವನ್ನ ಆಕೆಯ ತಲೆಗೆ ತೊಡಿಸಿದ್ದಾರೆ.

ಪುರಿಯನ್ನ ಕಿರೀಟ ಮಾಡಿಕೊಂಡಿದ್ದು ಮಾತ್ರವಲ್ಲದೇ ಅದರ ಹಾರವನ್ನೂ ಸಹ ಕುತ್ತಿಗೆಗೆ ಹಾಕಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಾತ್ರವಲ್ಲದೇ ನೆಟ್ಟಿಗರು ತಾವು ಇಂತದ್ದೊಂದು ಸಂಪ್ರದಾಯವನ್ನ ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...